ಪ.ಬಂಗಾಳದಲ್ಲಿ ಒಮಿಕ್ರಾನ್ ಹೆಚ್ಚಳ: ಇಂದಿನಿಂದ ಥಿಯೇಟರ್, ಶಾಲೆ, ಸಲೂನ್ ಬಂದ್

ಪ.ಬಂಗಾಳದಲ್ಲಿ ಒಮಿಕ್ರಾನ್ ಹೆಚ್ಚಳ: ಇಂದಿನಿಂದ ಥಿಯೇಟರ್, ಶಾಲೆ, ಸಲೂನ್ ಬಂದ್

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಒಮಿಕ್ರಾನ್ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಸೆಮಿ ಲಾಕ್‌ಡೌನ್ ಜಾರಿ ಮಾಡಿದೆ. ಇದರ ಪರಿಣಾಮ ಇಂದಿನಿಂದಲೇ ಮಾಲ್, ಥಿಯೇಟರ್, ಶಾಲೆ-ಕಾಲೇಜು ಹಾಗೂ ಸಲೂನ್‌ಗಳು ಬಂದ್ ಆಗಲಿವೆ. ಈ ಬಗ್ಗೆ ಅಧಿಕೃತವಾಗಿ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಚ್​.ಕೆ. ದ್ವಿವೇದಿ ಅವರು ಟ್ವೀಟ್ ಮಾಡಿ, ಒಮಿಕ್ರಾನ್ ಹೆಚ್ಚಳದಿಂದಾಗಿ ಇಂದಿನಿಂದ ಶಾಲಾ, ಕಾಲೇಜು, ಥಿಯೇಟರ್ ಹಾಗೂ ಸಲೂನ್, ಸ್ಪಾಗಳನ್ನು ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಕೋಲ್ಕತ್ತಾ ಸೇರಿದಂತೆ ರಾಜ್ಯದಲ್ಲಿ ಸೋಂಕು ಒಂದೇ ವಾರದಲ್ಲಿ ನಾಲ್ಕು ಪಟ್ಟು ಹೆಚ್ಚಳ ಕಂಡಿದೆ. ಇದರಿಂದಾಗಿ ವಾರದ ಪಾಸಿಟಿವಿಟಿ ದರ ಶೇ. 12.56 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಆ ರಾಜ್ಯದಲ್ಲಿ 19000 ಕ್ಕೂ ಹೆಚ್ಚು ಜನ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಸಿಎಂ ಮಮತಾ ಬ್ಯಾನರ್ಜಿ ಅವರು ಸಹ ತಮ್ಮ ಎಲ್ಲಾ ಸಾರ್ವಜನಿಕ ಸಮಾವೇಶಗಳನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಿದ್ದಾರೆ.