ಕರಿಷ್ಮಾ ಕಪೂರ್ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ನಿಧನ

ಕರಿಷ್ಮಾ ಕಪೂರ್ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ನಿಧನ

ಬಾಲಿವುಡ್‌ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ, ಕೈಗಾರಿಕೋದ್ಯಮಿ ಸಂಜಯ್ ಕಪೂರ್ 53ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ವರದಿಗಳ ಪ್ರಕಾರ, ಅವರು ಯುಕೆಯಲ್ಲಿ ಪೋಲೊ ಪಂದ್ಯ ಆಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಅಚ್ಚರಿಯ ವಿಷಯವೆಂದರೆ ಸಾವಿಗೆ ಕೆಲವು ಗಂಟೆಗಳ ಮೊದಲು, ಅವರು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಜೀವಹಾನಿಗೆ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದರು. 

ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ 2002ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಜನವರಿ 2003ರಲ್ಲಿ ಈ ಸಂಬಂಧ ಮುರಿದುಬಿತ್ತು. ಈ ಬೆನ್ನಲ್ಲೇ ಕರಿಷ್ಮಾ ಕಪೂರ್ 2003ರಲ್ಲಿ ದೆಹಲಿಯ ಉದ್ಯಮಿ ಸಂಜಯ್ ಕಪೂರ್ ಅವರನ್ನು ಅದ್ಭೂರಿಯಾಗಿ ವಿವಾಹವಾದರು. ಆದರೆ ಮದುವೆಯಾದ ಕೆಲವು ವರ್ಷಗಳ ನಂತರ, ಇಬ್ಬರ ನಡುವಿನ ಜಗಳದ ವಿಚಾರ ಮುನ್ನೆಲೆಗೆ ಬರಲು ಪ್ರಾರಂಭಿಸಿತು. ಕರಿಷ್ಮಾ ಕಪೂರ್ ಅವರಿಗೆ ಈ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ. ಮಗಳು ಸಮೈರಾ ಮತ್ತು ಮಗ ಕಿಯಾನ್. ಸುಮಾರು 10 ವರ್ಷಗಳ ದಾಂಪತ್ಯ ನಡೆಸಿದ ನಂತರ, 2016 ರಲ್ಲಿ ಕರಿಷ್ಮಾ ಹಾಗೂ ಸಂಜಯ್ ವಿಚ್ಛೇದನ ಪಡೆದರು.