ಬೈ ಎಲೆಕ್ಷನ್ ಸಂಬಂಧ ಸಿಎಂ ಡಿಸಿಎಂ ನೇತೃತ್ವದಲ್ಲಿ ಸಚಿವರ ಜೊತೆ ಮಹತ್ವದ ಸಭೆ

ಬೈ ಎಲೆಕ್ಷನ್ ಸಂಬಂಧ ಸಿಎಂ ಡಿಸಿಎಂ ನೇತೃತ್ವದಲ್ಲಿ ಸಚಿವರ ಜೊತೆ ಮಹತ್ವದ ಸಭೆ

ಬೆಂಗಳೂರು : ರಾಜ್ಯದಲ್ಲಿ 3 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಂಪುಟದ ಸಹೋದ್ಯೋಗಿಗಳ ಜೊತೆ ಸಿಎಂ‌ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. 

ಮೂರು ಕ್ಷೇತ್ರಗಳ ಉಪಚುನಾವಣೆ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲ್ಲುವುದರ ಮೂಲಕ ವಿಪಕ್ಷಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಚುನಾವಣಾ ಸಿದ್ದತೆಗಾಗಿ ಸಚಿವರ ಜೊತೆ ಸಿಎಂ ಸಭೆ ಕರೆದಿದ್ದಾರೆ. 

ಸಿಎಂ ಸಿದ್ದರಾಮಯ್ಯನವರ ಕಾವೇರಿ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹಿರಿಯ ಸಚಿವರುಗಳು ಸೇರಿದಂತೆ ಸಂಪುಟ ಕೆಲ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದಿನ ಸಭೆಯಲ್ಲಿ ಪ್ರಮುಖವಾಗಿ ಮೂರು ಕ್ಷೇತ್ರದಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕಿದೆ ಅದಕ್ಕೆ ಬೇಕಾದ ರೂಪರೇಷೆಗಳನ್ನ ಸಿದ್ದಪಡಿಸಲು ಸಚಿವರ ಜೊತೆ ಸಿಎಂ ಡಿಸಿಎಂ ಸಭೆ ನಡೆಸಿದ್ದಾರೆ. 

ಇನ್ನರೆಡು ದಿನಗಳಲಿ ಅಭ್ಯರ್ಥಿ ಆಯ್ಕೆಯಾಗಲಿದೆ ತದನಂತರ ಚುನಾವಣ ಪ್ರಚಾರದಲ್ಲಿ ತಾವೆಲ್ಲ ತೊಡಗಿಸಿಕೊಳ್ಳಬೇಕು ಎಂದು ಸಿಎಂ ತಾಕೀತು ಮಾಡಿದ್ದಾರೆ. ಸಚಿವರುಗಳಿಗೆ ಮೂರು ಕ್ಷೇತ್ರದ ವಿಂಗಡನೆ ಮಾಡಿ ಉಸ್ತುವಾರಿವಹಸಲಿದ್ದೇವೆ ತಮಗೆ ಕೊಟ್ಟಿರುವ ಕ್ಷೇತ್ರ ಗೆಲ್ಲಸಿಕೊಂಡು ಬರಬೇಕು ಎಂದು ಸೂಚಿಸಲಿದ್ದಾರೆ ಎನ್ನಲಾಗಿದೆ. 

ಇದ್ರ ಜೊತೆಗೆ ಜಾತಿಗಣಿತಿ ವರದಿ ಮತ್ತು ಒಳ ಮೀಸಲಾತಿ ಬಗ್ಗೆಯೂ ಸಚಿವರ ಜೊತೆ ಸಿಎಂ ಚರ್ಚೆ ನಡೆಸುತ್ತಾರೆ ಎನ್ನಲಾಗಿದೆ.