ಕೋವಿಡ್ ಕೇಸ್ ಹೆಚ್ಚಳ: ಎಚ್ಚರಿಕೆ ಕೊಟ್ಟ ಡಬ್ಲ್ಯುಎಚ್ ಒ

ಜಿನಿವಾ : ತಗ್ಗುತ್ತಿದೆ ಕೊರೊನಾ ಎನ್ನುವಷ್ಟರಲ್ಲಿ ಮತ್ತೆ ತನ್ನ ಅಟ್ಟಹಾಸ ಮುಂದುವರೆಸುತ್ತಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ ಒ) ಜಾಗೃತಿಯ ಬಗ್ಗೆ ಎಚ್ಚರಿಕೆ ಕೊಟ್ಟಿದೆ. ಹೌದು ಕೆಲ ರಾಷ್ಟ್ರಗಳಲ್ಲಿ ಕೊರೊನಾ ಕೇಸ್ ಗಳು ಹೆಚ್ಚುತ್ತಿವೆ ಬರುವ ದಿನಗಳಲ್ಲಿ ಕೋವಿಡ್ ಪಿಡುಗು ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ಮಹಾ ನಿರ್ದೇಶಕ ಟೆಡ್ರೋಸ್ ಅಧನೋಮ್ ಗೆಬ್ರಿಯೇಸಸ್ ಹೇಳಿದ್ದಾರೆ. 'ಕೋವಿಡ್ ಗೆ ಸಂಬಂಧಿಸಿದಂತೆ ಪ್ರತಿ ದೇಶದ ಪರಿಸ್ಥಿತಿ ಬೇರೆ ಇದ್ದು, ಅವುಗಳು ಎದುರಿಸುತ್ತಿರುವ ಸವಾಲುಗಳು ಸಹ ವಿಭಿನ್ನವಾಗಿವೆ. ಹೀಗಾಗಿ ಕೋವಿಡ್ ಪಿಡುಗು ಮುಕ್ತಾಯವಾಗಿದೆ ಎಂಬುದಾಗಿ ಭಾವಿಸಬಾರದು' ಎಂದಿದ್ದಾರೆ. ಏಷ್ಯಾ ರಾಷ್ಟ್ರಗಳು ಸೇರಿದಂತೆ ಅನೇಕ ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ. ಎಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲ ಮಾಡಿದ ಪ್ರದೇಶಗಳಲ್ಲಿ ಈಗ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಮರಣ ಪ್ರಮಾಣವೂ ಅಧಿಕವಾಗಿದೆ. ಅದರಲ್ಲೂ, ಲಸಿಕೆ ನೀಡಿಕೆ ಪ್ರಮಾಣ ಕಡಿಮೆ ಇರುವ ದೇಶಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ' ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.