ಯಲಹಂಕ: MLA ಜಮೀರ್ ಅಹ್ಮದ್ ಕುಟುಂಬದ ಭೂ ಕಬಳಿಕೆ ವಿರುದ್ಧ FIR

ಯಲಹಂಕ: ಚಾಮರಾಜಪೇಟೆ MLA ಜಮೀರ್ ಅಹ್ಮದ್ ಕುಟುಂಬ ಅಕ್ರಮವಾಗಿ ಭೂಕಬ್ಜಾ ಮಾಡಿರುವುದರ ವಿರುದ್ಧ ಸಂಪಿಗೇಹಳ್ಳಿ ಪೊಲೀಸ್ ಠಾಣೆಲಿ FIR ದಾಖಲಾಗಿದೆ. ಜಮೀರ್ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿ ಬಂದಿದೆ. ಏಳು ವರ್ಷದ ಹಿಂದೆ ಚೊಕ್ಕನಹಳ್ಳಿ ಬಡಾವಣೆ ಸೈಟ್ ನಂ. 5, & 6ರ 5380 ಚದರ ಅಡಿ ಜಾಗವನ್ನು 2018 ಶ್ರೀಮತಿ ಶಹಿಸ್ತಾ ನಾಜ್ನಿ ಕುಟುಂಬ 4 ಜನರಿಂದ ಸೈಟ್ ಖರೀದಿಸಿತ್ತು. 2018ರಿಂದ 2021ರ ಆಗಸ್ಟ್ ವರೆಗೂ ಎಲ್ಲವು ಚೆನ್ನಾಗಿತ್ತು. ನಂತರ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ತಮ್ಮ ಜಮೀಲ್ ಅಹ್ಮದ್ ಮತ್ತು ಇತರರು ಶಹಿಸ್ತಾರ ಜಮೀನನ್ನು ಕಬ್ಜಾ ಮಾಡಿ, ಪೊಸಿಷನ್ ಗೆ ಬಂದರೆ ಕೊಲೆ ಮಾಡುವುದಾಗಿ ಜಮೀರ್ ಬೆಟಾಲಿಯನ್ ಶಹಿಸ್ತಾ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿತ್ತು. ಈ ನಡುವೆ ಕೋರ್ಟ್ ಮೆಟ್ಟಿಲೇರಿದ ಆಕೆಯ ದೂರಿನಂತೆ ಈಗ ಜಮೀರ್ ಅಹ್ಮದ್, ಸಹೋದರ ಸಹಿತ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾವು ಪ್ರಾಪರ್ಟಿ ಬಳಿ ಹೋದ್ರೆ ಆಸಿಡ್ ಹಾಕ್ತಿವಿ ಅಂತ ಮಾರಕಾಸ್ತ್ರ ಹಿಡಿದು ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೈಟ್ ಮಾಲೀಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾಲೀಕರು ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಸಂಪಿಗೆಹಳ್ಳಿ ಪೊಲೀಸರಿಗೆ FIR ದಾಖಲಿಸುವಂತೆ ಕೋರ್ಟ್ ಆದೇಶಿಸಿತ್ತು. ಆದರೂ ಕಳೆದ ಡಿಸೆಂಬರ್ ನಿಂದ ಸೈಟ್ ಮಾಲೀಕರನ್ನು ಅಲೆಸುತ್ತಲೇ ಇದ್ದರು. ಸದ್ಯ ಸಂಪಿಗೆಹಳ್ಳಿ ಪೊಲೀಸರು ಇದೀಗ ಶಾಸಕ ಜಮೀರ್, ಸಹೋದರ ಜಮೀಲ್, ನ್ಯಾಷನಲ್ ಟ್ರಾವೆಲ್ಸ್ ಹಾಗೂ ಇತರರ ವಿರುದ್ಧ FIR ದಾಖಲಿಸಿದ್ದಾರೆ.