ಬ್ರೇಕಿಂಗ್ : ಶಿವಮೊಗ್ಗ ಧಗ ಧಗ ಪರಿಸ್ಥಿತಿ ಕಂಟ್ರೋಲ್ ಗೆ ಹೆಚ್ಚಿನ ಪೊಲೀಸ್ ನಿಯೋಜನೆ

ಬ್ರೇಕಿಂಗ್ :  ಶಿವಮೊಗ್ಗ ಧಗ ಧಗ ಪರಿಸ್ಥಿತಿ ಕಂಟ್ರೋಲ್ ಗೆ ಹೆಚ್ಚಿನ ಪೊಲೀಸ್ ನಿಯೋಜನೆ

ಶಿವಮೊಗ್ಗ : ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ ಹೆಚ್ಚುವರಿ ಭದ್ರತೆಗೆ ಬೆಂಗಳೂರು ಪೊಲೀಸರ ನಿಯೋಜನೆ ಮಾಡಲಾಗಿದೆ. ಇನ್ಸ್ಪೆಕ್ಟರ್ , ಸಬ್ ಇನ್ಸ್ಪೆಕ್ಟರ್ ಸೇರಿ ಒಟ್ಟು 212 ಜನ ಪೊಲೀಸರನ್ನ ಭದ್ರತೆಗೆ ನಿಯೋಜಿಸಿ ತಕ್ಷಣವೇ ಶಿವಮೊಗ್ಗಕ್ಕೆ ಹೊರಡುವಂತೆ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಶಿವಮೊಗ್ಗ ಭಾಗದಲ್ಲಿ ಕೆಲಸ ಮಾಡಿದ್ದ ಪೊಲೀಸರನ್ನೇ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಸಂಜೆ ವೇಳೆ ಪರಿಸ್ಥಿತಿ ನೋಡಿ ಮತ್ತಷ್ಟು ಪೊಲೀಸರು ನಿಯೋಜನೆ ಸಾಧ್ಯತೆಗಳಿವೆ. ಇನ್ನು ಬಂದೋಬಸ್ತ್ ಗೆ ಹೋಗುವಂತಹ ಅಧಿಕಾರಿಗಳು ಪಿಸ್ತೂಲ್ ಕಡ್ಡಾಯವಾಗಿ ಕೊಂಡೊಯ್ಯಬೇಕು. ಸಿಬ್ಬಂಧಿಗಳು ಲಾಠಿ ಮತ್ತು ಹೆಲ್ಮೆಟ್ ಕಡ್ಡಾಯವಾಗಿ ಇರಬೇಕು ಎಂದು ಪೊಲೀಸ್ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.