ಧಾರವಾಡ: ತಪಾಸಣೆ ವೇಳೆ ವಶಪಡಿಸಿಕೊಳ್ಳಲಾದ ಹಣ ವಾಪಸ್ ಕೊಡಲು ಕ್ಯಾಶ್ ರಿಲೀಸ್ ಕಮಿಟಿ ರಚನೆ

ಧಾರವಾಡ: ತಪಾಸಣೆ ವೇಳೆ ವಶಪಡಿಸಿಕೊಳ್ಳಲಾದ ಹಣ ವಾಪಸ್ ಕೊಡಲು ಕ್ಯಾಶ್ ರಿಲೀಸ್ ಕಮಿಟಿ ರಚನೆ

ಧಾರವಾಡ: ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆ ಜಾರಿ ಇರುವ ಸಂದರ್ಭದಲ್ಲಿ ಚೆಕ್ ಪೋಸ್ಟ್ ಹಾಗೂ ಇತರ ಸ್ಥಳಗಳಲ್ಲಿನ ತಪಾಸಣೆಯಲ್ಲಿ ದಾಖಲೆ ಹೊಂದಿರದ ಹಣವನ್ನು ವಶಕ್ಕೆ ಪಡೆದು ಸೀಜ್ ಮಾಡಲಾಗುತ್ತದೆ. 

ಸಂಬಂಧಿಸಿದವರು ಸೀಜ್ ಮಾಡಿದ ಹಣಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ, ಪರಿಶೀಲಿಸಿ ಆ ಹಣ ಬಿಡುಗಡೆ ಮಾಡಲು ಜಿಲ್ಲಾಮಟ್ಟದ ಕ್ಯಾಶ್ ರಿಲೀಅ್ ಕಮಿಟಿಯನ್ನು ರಚಿಸಿ, ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶ ಹೊರಡಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಆಗಿರುವ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಮೋನಾ ರೋತ್ (85279819880) ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕ್ಯಾಶ್ ರಿಲೀಸ್ ಕಮಿಟಿ ರಚಿಸಲಾಗಿದೆ ಮತ್ತು ಈ ಕಮಿಟಿ ಸಂಚಾಲಕರಾಗಿ ಚುನಾವಣಾ ವೆಚ್ಚದ ಉಸ್ತುವಾರಿ ಜಿಲ್ಲಾ ನೋಡಲ್ ಅಧಿಕಾರಿ ಆಗಿರುವ ಎಚ್.ಡಿ.ಎಂ.ಸಿ.ಯ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ ಪಿ.ಬಿ. (9844679079) ಹಾಗೂ ಜಿಲ್ಲಾ ಖಜಾನೆ ಅಧಿಕಾರಿ ವೈ.ವೈ ಹೊನ್ನಳ್ಳಿ (0836-2448251, 9449739914) ಅವರು ಸದಸ್ಯರಾಗಿದ್ದಾರೆ. 

ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಹಣಕ್ಕೆ ದಾಖಲೆಯೊಂದಿಗೆ ಮನವಿ ಸಲ್ಲಿಸಿದಲ್ಲಿ ಅದನ್ನು ಕೂಲಂಕುಷವಾಗಿ ಪರಿಶೀಲಿಸಿ, ನೀತಿ ಸಂಹಿತೆ ಉಲ್ಲಂಘನೆಗೆ ಇದು ಒಳಪಡುವುದಿಲ್ಲ ಎಂಬುವುದನ್ನು ಖಾತರಿ ಮಾಡಿಕೊಂಡು ಜಿಲ್ಲಾ ಕ್ಯಾಶ್ ರಿಲೀಸ್ ಕಮಿಟಿ ಹಣ ಮರಳಿ ನೀಡಲು ಕ್ರಮಕೈಗೊಳ್ಳುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.