WPL 2024 : ಬರೋಬ್ಬರಿ 16 ವರ್ಷಗಳ ತಪಸ್ಸು - ಕೊನೆಗೂ ಕಪ್ ಗೆದ್ದ RCB

ಮಹಿಳಾ ಪ್ರೀಮಿಯರ್ ಲೀಗ್ 2024ರ ಫೈನಲ್ ಕದನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ಈ ಮೂಲಕ ಐಪಿಎಲ್ ಕಪ್ ಗೆಲ್ಲೋ ಆರ್ಸಿಬಿ 16 ವರ್ಷಗಳ ಕನಸು ಕೊನೆಗೂ ನನಸಾಗಿದೆ.
ಹೌದು, ಆರ್ಸಿಬಿ ಮೆನ್ ಟೀಮ್ ಕಳೆದ 16 ಸೀಸನ್ಗಳಲ್ಲೂ ಐಪಿಎಲ್ ಕಪ್ ಗೆದ್ದಿಲ್ಲ. ಆದರೀಗ ಮಹಿಳಾ ಆರ್ಸಿಬಿ ತಂಡ 2ನೇ ಸೀಸನ್ನಲ್ಲೇ ಕಪ್ ಗೆದ್ದು ಬರೋಬ್ಬರಿ 16 ವರ್ಷಗಳ ಕಪ್ ಬರವನ್ನು ನೀಗಿಸಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ.
ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿತ್ತು. ಕೇವಲ 18.3 ಓವರ್ಗಳಲ್ಲಿ 113 ರನ್ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಆಲೌಟ್ ಆಗಿತ್ತು.
ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಆರ್ಸಿಬಿ ಕೇವಲ 19.3 ಓವರ್ಗಳಲ್ಲೇ 115 ರನ್ ಗಳಿಸೋ ಮೂಲಕ ಗೆದ್ದು ಬೀಗಿದೆ. ಬರೋಬ್ಬರಿ 8 ವಿಕೆಟ್ಗಳ ದಾಖಲೆ ಗೆಲುವು ಸಾಧಿಸಿದೆ. ಆರ್ಸಿಬಿ ತಂಡದ ಪರ ಕ್ಯಾಪ್ಟನ್ ಸ್ಮೃತಿ ಮಂದಾನ 31, ಸೋಫಿ ಡಿವೈನ್ 34, ಎಲೆಸಿ ಪೆರಿ 35, ರಿಚಾ ಘೋಷ್ 17 ರನ್ ಗಳಿಸಿದ್ರು.