ಖೇಲ್‌ ರತ್ನಕ್ಕೆ ಸಾತ್ವಿಕ್-‌ ಚಿರಾಗ್‌ - ಅರ್ಜುನ ಪ್ರಶಸ್ತಿಗೆ ಶಮಿ ಹೆಸರು ಶಿಫಾರಸು

ಖೇಲ್‌ ರತ್ನಕ್ಕೆ ಸಾತ್ವಿಕ್-‌ ಚಿರಾಗ್‌ - ಅರ್ಜುನ ಪ್ರಶಸ್ತಿಗೆ ಶಮಿ ಹೆಸರು ಶಿಫಾರಸು

ನವದೆಹಲಿ : ಪುರುಷರ ಪ್ರಖ್ಯಾತ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ಹಾಗೂ ಉಡುಪಿ ಮೂಲದ ಚಿರಾಗ್ ಶೆಟ್ಟಿ ಹೆಸರು ಮೇಜರ್ ಧ್ಯಾನ್ಚಂದ್ ಖೇಲ್ರತ್ನ ಪ್ರಶಸ್ತಿಗೆ ಶಿಫಾರಸುಗೊಂಡಿದೆ. 

ಹಾಗೆಯೇ ಈ ಬಾರಿಯ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿ ಮಿಂಚಿದ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮದ್ ಶಮಿ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ.