ಎಲ್ಲೆಂದರಲ್ಲಿ ಕಸ ಚೆಲ್ಲಿದರೆ ಎಚ್ಚರ..!
ಹುಬ್ಬಳ್ಳಿ: ಎಲ್ಲೆಂದರಲ್ಲಿ ಕಸ ಚೆಲ್ಲುವುಕಿಂತ ಒಂದು ಸಾರಿ ಯೋಚನೆ ಮಾಡಿ. ಯಾಕೆಂದರೆ ಪಾಲಿಕೆ ಅಧಿಕಾರಿಗಳು ನಿಮ್ಮ ಮನೆಗೆ ಸಹ ಬರಬಹುದು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ 6 ಕಚೇರಿ ವ್ಯಾಪ್ತಿಯಲ್ಲಿ ಕಸವನ್ನು ಎಲ್ಲಿಂದರಲ್ಲಿ ಚೆಲ್ಲುತ್ತಿರುವುದನ್ನು ಮನಗಂಡ ಪಾಲಿಕೆ ಅಧಿಕಾರಿಗಳು ಕಸ ಚೆಲ್ಲಿದಕ್ಕೆ ಬರೊಬ್ಬರಿ 5000 ರೂ. ದಂಡ ವಿಧಿಸಿದ್ದಾರೆ. ದಂಡ ವಿಧಿಸಿದ ಅಧಿಕಾರಿಗಳು, ನಾಗರೀಕರು ಸ್ವಚ್ಚತೆ ಮಹತ್ವ ನೀಡುವಂತೆ ಹಾಗೂ ಪಾಲಿಕೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.