ಬ್ರೇಕಿಂಗ್ : "ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ' : ತಕ್ಷಣ ಕಾರ್ಯರೂಪಕ್ಕೆ - ಟ್ರಂಪ್ ಘೋಷಣೆ

ಬ್ರೇಕಿಂಗ್ :

ನವದೆಹಹಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಗೆ ತಾತ್ಕಾಲಿಕ ವಿರುಳಿಸುವಿಕೆ ಕಂಡುಬಂದಿದ್ದು, ಎರಡೂ ರಾಷ್ಟ್ರಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. 

ಈ ಬಗ್ಗೆ ರಾಯಿಟರ್ಸ್ ವರದಿಯಲ್ಲಿ ಅವರು "ಈ ಒಪ್ಪಂದದ ಬಗ್ಗೆ ಘೋಷಿಸಲು ನನಗೆ ಸಂತೋಷವಾಗಿದೆ" ಎಂದು ಹೇಳಿದ್ದಾರೆ. 

ಟ್ವಿಟ್‌ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ತಿಳಿಸಿದ್ದು, ಕದನ ವಿರಾಮಕ್ಕೆ ಭಾರತ- ಪಾಕಿಸ್ತಾನ ಸಮ್ಮತಿಸಿವೆ. ಶಾಂತಿ ಮಾರ್ಗದಲ್ಲಿ ಮಾತುಕತೆ ನಡೆಸಲು ಒಪ್ಪಿಗೆ ಸೂಚಿಸಿವೆ. ಉಭಯ ದೇಶಗಳು ಬುದ್ದಿವಂತಿಕೆ ಪ್ರದರ್ಶಿಸಿವೆ ಎಂದು ಟ್ರಂಪ್ ತಿಳಿಸಿದ್ದಾರೆ. 

ದಾಳಿ-ಪ್ರತಿದಾಳಿಗಳ ಸರಣಿಯಿಂದ ಅಂತರರಾಷ್ಟ್ರೀಯ ಸಮುದಾಯದಲ್ಲೂ ಆತಂಕ ಮೂಡಿದ್ದ ಹಿನ್ನೆಲೆಯಲ್ಲಿ, ಈ ಘೋಷಣೆ ಶಾಂತಿಯ ಆಶೆ ಮೂಡಿಸಿದೆ. ವಿಶ್ವ ನಾಯಕರಿಂದ ಶ್ಲಾಘನೆ ವ್ಯಕ್ತವಾಗುತ್ತಿರುವ ಈ ಹೆಜ್ಜೆಯಿಂದ, ಶಾಂತಿ ಪ್ರಕ್ರಿಯೆಗೆ ಹೊಸ ದಿಕ್ಕು ಸಿಗಲಿದೆ ಎಂಬ ನಿರೀಕ್ಷೆಯಿದೆ.