ಅವಾಂತರಿ ಸೈಕ್ಲೋನ್ಗೆ ನಲುಗಿದ ಗುಜರಾತ್ : 125 ಕಿಮೀ ವೇಗದಲ್ಲಿ ಬೀಸಿದ ಮಾರುತ

ಅವಾಂತರಿ ಸೈಕ್ಲೋನ್ಗೆ ನಲುಗಿದ ಗುಜರಾತ್ : 125 ಕಿಮೀ ವೇಗದಲ್ಲಿ ಬೀಸಿದ ಮಾರುತ

ಗುಜರಾತ್ನಲ್ಲಿ ಬಿಪರ್ಜಾಯ್ ಚಂಡಮಾರುತ ಅಬ್ಬರಿಸಿ ಬೊಬ್ಬೆರಿಯುತ್ತಿದೆ. ಹೀಗಾಗಿ ರಾಜ್ಯದೆಲ್ಲೆಡೆ ರೆಡ್ ಆಲರ್ಟ್ ಘೋಷಣೆ ಮಾಲಾಗಿದೆ. ಬಿಪರ್ಜಾಯ್ ಚಂಡಮಾರುತ ಗುರುವಾರ ರಾತ್ರಿ ಗುಜರಾತ್ನ ಸೌರಾಷ್ಟ್ರ ಮತ್ತು ಕಛ್ ಕರಾವಳಿಗೆ ಅಪ್ಪಳಿಸಿದೆ. 125 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಅನಾಹುತಗಳು ಸಂಭವಿಸಿವೆ. 

ಶುಕ್ರವಾರವೂ ಗಾಳಿಯ ವೇಗ ಹೆಚ್ಚಾಗಿರುತ್ತದೆ. ಕಛ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್ಗರ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ, ಮಳೆ ಆಗುತ್ತಿದೆ. ತಗ್ಗು ಪ್ರದೇಶಗಳು ಮುಳುಗಡೆ ಆಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಸಮುದ್ರದಲ್ಲಿ 2-3 ಮೀಟರ್ ಎತ್ತರದ ಅಲೆ ಏಳಲಿದೆ ಎಂದು ಅಂದಾಜಿಸಲಾಗಿದೆ. 

ಗುಜರಾತ್ನ ಎಂಟು ಕರಾವಳಿ ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ಜನರನ್ನು ತಾತ್ಕಾಲಿಕ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಛ್ ಜಿಲ್ಲೆಯಲ್ಲಿ 46,800 ಜನರನ್ನು ಸ್ಥಳಾಂತರಿಸಲಾಗಿದೆ. ದೇವಭೂಮಿ ದ್ವಾರಕಾದಲ್ಲಿ 10,749, ಜಾಮ್ಗರದಲ್ಲಿ 9,942, ಮೋರ್ಬಿಯಲ್ಲಿ 9,243, ರಾಜ್ಕೋಟ್ನಲ್ಲಿ 6,822, ಮತ್ತು ಜುನಾದಲ್ಲಿ 4,869 ಜನರನ್ನು ಸ್ಥಳಾಂತರ ಮಾಡಲಾಗಿದೆ. ಸ್ಥಳಾಂತರಿಸಲ್ಪಟ್ಟವರಲ್ಲಿ 8,900 ಮಕ್ಕಳು, 1,131 ಗರ್ಭಿಣಿಯರು, 4,697 ವೃದ್ಧರು ಸೇರಿದ್ದಾರೆ. ಈ ಎಂಟು ಜಿಲ್ಲೆಗಳಲ್ಲಿ ಒಟ್ಟು 1,521 ತಾತ್ಕಾಲಿಕ ಆಶ್ರಯ ಮನೆಗಳನ್ನು ಸ್ಥಾಪಿಸಲಾಗಿದೆ. ವೈದ್ಯಕೀಯ ತಂಡಗಳು ನಿಯಮಿತವಾಗಿ ಭೇಟಿ ನೀಡುತ್ತಿವೆ. 

ಗುಜರಾತ್ ಪ್ರದೇಶಕ್ಕೆ ಸೇವೆ ಸಲ್ಲಿಸುವ ಪಶ್ಚಿಮ ರೈಲ್ವೆ ಬುಧವಾರ ಪ್ರಯಾಣಿಕರ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ 76 ರೈಲುಗಳು, 36 ಸೇವೆಗಳನ್ನು ಅಲ್ಪಾವಧಿಗೆ ರದ್ದುಗೊಳಿಸಿದೆ. 

ಬೆಂಗಾಲಿ ಭಾಷೆಯಲ್ಲಿ ಬಿಪರ್ಜಾಯ್ ಎಂದರೆ ವಿಪತ್ತು ಎಂದರ್ಥ. ಈ ಚಂಡಮಾರುತ ಹೆಚ್ಚು ಶಕ್ತಿಯುತವಾಗಿರುವ ಕಾರಣ ಬಿಪರ್ಜಾಯ್ (ವಿಪತ್ತು) ಎಂದು ನಾಮಕರಣ ಮಾಡಲಾಗಿದೆ.