ಎರಡೂ ಡೋಸ್ ಲಸಿಕೆ ಹಾಕಿಸಿದವರಿಗೆ ಗ್ರೀನ್ ಪಾಸ್-ಸರ್ಕಾರದ ಚಿಂತನೆ

ಎರಡೂ ಡೋಸ್ ಲಸಿಕೆ ಹಾಕಿಸಿದವರಿಗೆ ಗ್ರೀನ್ ಪಾಸ್-ಸರ್ಕಾರದ ಚಿಂತನೆ

ಬೆಂಗಳೂರು:ಕೊರೊನಾ ಎರಡೂ ಡೋಸ್ ಲಸಿಕೆ ಪಡೆದ ಜನಕ್ಕೆ ಗ್ರೀನ್ ಪಾಸ್ ಇಲ್ಲವೇ ಯುನಿವರ್ಸಲ್ ಪಾಸ್ ಕೊಡುವ ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ ಬಳಿಕ ಸುಧಾಕರ್ ಮಾಧ್ಯಮಕ್ಕೆ ಮಾತನಾಡಿದ್ದಾರೆ. ಹೋಟೆಲ್ ಮತ್ತು ರೆಸ್ಟೋರಂಟ್‌ಗಳಿಗೆ ಮತ್ತು ಬಸ್ ಸಂಚಾರ ಮಾಡುವ ಜನಕ್ಕೆ ಈ ಪಾಸ್ ನೆರವಾಗಲಿದೆ ಅಂತಲೇ ಸಚಿವ ಸುಧಾಕರ್ ಹೇಳಿದ್ದಾರೆ.