ಧಾರವಾಡ: ವಿನೋದ್ ಅಸೂಟಿ 16 ಕೋಟಿ ಒಡೆಯ

ಧಾರವಾಡ: ವಿನೋದ್ ಅಸೂಟಿ 16 ಕೋಟಿ ಒಡೆಯ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಂಗಳವಾರ ತಮ್ಮ ಉಮೇದುವಾರಿಕೆ ಸಲ್ಲಿಸಿರುವ ವಿನೋದ್ ಅಸೂಟಿ 16 ಕೋಟಿ ರೂಪಾಯಿ ಒಡೆಯರಾಗಿದ್ದಾರೆ. 

ವಿನೋದ್ ಅಸೂಟಿ ಬಳಿ ಕಾರಿಗಿಂತ ಟಿಪ್ಪರ್‌ಗಳೇ ಹೆಚ್ಚಿವೆ. 8 ಟಿಪ್ಪರ್ ವಾಹನ ಹೊಂದಿರುವ ವಿನೋದ್ ಅವರು ಒಟ್ಟು ಆಸ್ತಿ ಮೌಲ್ಯ 16,19,58,107 ರೂಪಾಯಿ ಆಗಿದೆ. ಅಸೂಟಿ ಅವರ ವೈಯಕ್ತಿಕ ಚರಾಸ್ತಿ 12,00,34,607 ರೂಪಾಯಿ ಇದ್ದು, 4,10,65,000 ಸ್ಥಿರಾಸ್ತಿ ಇದೆ. ಪತ್ನಿ ವಸುಂಧರಾ ಹೆಸರಿನಲ್ಲಿ 3,48,500 ಚರಾಸ್ತಿ ಇದ್ದು, ಪತ್ನಿಯ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. 

ಅಸೂಟಿ ಹೆಸರಿನಲ್ಲಿ 4,50,54,582 ರೂಪಾಯಿ ಸಾಲ ಕೂಡ ಇದೆ. 8 ಟಿಪ್ಪರ್ ವಾಹನ, 1 ಜೆಸಿಬಿ ಲೋಡರ್, 1 ಕ್ಯಾಂಟರ್, 1 ಹಿಟಾಚಿ ಹೊಂದಿರುವ ಅವರ ಬಳಿ, 350 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಹೊಂದಿದ್ದಾರೆ. ಪತ್ನಿ ಬಳಿ 50 ಗ್ರಾಂ ಚಿನ್ನ ಇರುವುದಾಗಿ ಅಸೂಟಿ ಅವರು ಇಂದು ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.