ಭಾರತ ಮೂಲದ 'ವೈಭವ್ ತನೇಜಾ' ಗೆ ಟೆಸ್ಲಾ 'CFO' ಜವಾಬ್ದಾರಿ

ನವದೆಹಲಿ : ಉದ್ಯಮಿ ಎಲಾನ್ ಮಸ್ಕ್ ಒಡೆತನದ ವಿದ್ಯುತ್ ಚಾಲಿತ ಕಾರು ತಯಾರಿಕಾ ಕಂಪನಿ ಟೆಸ್ಲಾಗೆ ಭಾರತೀಯ ಸಂಜಾತ ವೈಭವ್ ತನೇಜಾ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ವೈಭವ್ ಈಗಾಗಲೇ ಕಂಪನಿಯ ಮುಖ್ಯ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ಇನ್ಮುಂದೆ ಸಿಎಫ್ ಒ ಹುದ್ದೆಯನ್ನೂ ಹೆಚ್ಚುವರಿಯಾಗಿ ನಿರ್ವಹಿಸಲಿದ್ದಾರೆ.
ಭಾರತೀಯ ಮೂಲದ ಅಧಿಕಾರಿಗಳ ಪ್ರತಿಭೆಯನ್ನ ಇಡೀ ವಿಶ್ವವೇ ಮನಗೊಂಡಿದ್ದು, ಭಾರತೀಯ ಮೂಲದ ಕಾರ್ಯನಿರ್ವಾಹಕರು ಪ್ರಸ್ತುತ ಮೈಕ್ರೋಸಾಫ್ಟ್‌ನಿಂದ ಗೂಗಲ್‌ವರೆಗಿನ ಅನೇಕ ದೊಡ್ಡ ಕಂಪನಿಗಳ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದಾರೆ. ಇದೀಗ ಸತ್ಯ ನಾದೆಲ್ಲಾ ಮತ್ತು ಸುಂದರ್ ಪಿಚೈ ಅವ್ರ ಈ ಅಮೋಘ ಸರಣಿಗೆ ಮತ್ತೊಬ್ಬ ಭಾರತೀಯ ಪ್ರತಿಭೆಯ ಹೆಸರು ಸೇರ್ಪಡೆಯಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.