ಬೆಳಗಾವಿ - ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ

ಬೆಂಗಳೂರು: ಬೆಳಗಾವಿ ಹಾಗೂ ಬೆಂಗಳೂರು ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಶೀಘ್ರದಲ್ಲಿ ಆರಂಭವಾಗಲಿದೆ. ಏಪ್ರಿಲ್ ಮೊದಲ ವಾರದಿಂದ ಈ ಎರಡೂ ನಗರಗಳ ನಡುವೆ ನೇರವಾಗಿ ವಂದೇ ಭಾರತ್ ರೈಲು ಸೇವೆ ಆರಂಭಿಸುವುದಾಗಿ ವರದಿಯಾಗಿದೆ.
ಏಪ್ರಿಲ್ ಮೊದಲ ವಾರದಿಂದ ಬೆಳಗಾವಿಯಿಂದ ಬೆಂಗಳೂರು ನಗರಗಳ ನಡುವೆ ನೇರವಾಗಿ ವಂದೇ ಭಾರತ್ ರೈಲು ಸೇವೆ ಆರಂಭಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. ಈವರೆಗೆ ಬೆಂಗಳೂರು ಧಾರವಾಡ ನಡುವೆ ಈ ಸೇವೆ ಇತ್ತು. ಅದನ್ನು ಬೆಳಗಾವಿಯವರೆಗೆ ವಿಸ್ತರಿಸುವಂತೆ ಬೆಳಗಾವಿಯ ಸಂಸದರಾದ ಜಗದೀಶ್ ಶೆಟ್ಟರ್ ಅವರು ಮನವಿ ಮಾಡಿದ್ದರು. ಅದರಂತೆ ಧಾರವಾಡ ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ಪ್ರಾಯೋಗಿಕವಾಗಿ ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ. ಆ ಹಿನ್ನೆಲೆಯಲ್ಲಿ ಏಪ್ರಿಲ್ ಮೊದಲ ವಾರದಿಂದ ಅಲ್ಲಿ ರೈಲು ಸೇವೆ ಸಿಗುವ ಸಾಧ್ಯತೆಗಳಿವೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ನಡುವೆ ನವದೆಹಲಿಯಲ್ಲಿ ನಡೆದ ಫಲಪ್ರದ ಸಭೆಯ ನಂತರ ಈ ಬೆಳವಣಿಗೆ ನಡೆದಿದೆ.