ಜುಲೈ 17-18ರಂದು ಬೆಂಗಳೂರಿನಲ್ಲಿ ನಡೆಯಲಿದೆ ವಿರೋಧ ಪಕ್ಷಗಳ ಸಭೆ

ಜುಲೈ 17-18ರಂದು ಬೆಂಗಳೂರಿನಲ್ಲಿ ನಡೆಯಲಿದೆ ವಿರೋಧ ಪಕ್ಷಗಳ ಸಭೆ

ಬೆಂಗಳೂರು: ಬಿಜೆಪಿಯೇತರ ಪಕ್ಷಗಳು ಬರುವ ಸಾರ್ವತ್ರಿಕ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ನಿರ್ಧರಿಸಿವೆ. ಅದಕ್ಕಾಗಿ ಈಗಾಗಲೇ ಸಭೆ ಸೇರಿವೆ. ಇದರ ಮುಂದಿನ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಜುಲೈ 17 ಹಾಗೂ 18ರಂದು ಸಭೆ ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಭೆ ವಿರೋಧ ಪಕ್ಷಗಳ ಒಗ್ಗಟ್ಟನ್ನು ಸಾಬೀತುಪಡಿಸಲು ಅತ್ಯಂತ ಮಹತ್ವದ್ದು ಪರಿಗಣಿಸಲಾಗಿದೆ. 

24 ಪಕ್ಷಗಳ ಪ್ರತಿನಿಧಿಗಳು ಬೆಂಗಳೂರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. 2024ರ ರಾಜಕೀಯ ಕದನದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಪ್ರಬಲ ರಂಗ ರಚಿಸುವ ಪ್ರಯತ್ನಕ್ಕೆ ಎಂಟು ಪಕ್ಷಗಳ ಬೆಂಬಲ ಸಿಕ್ಕಿದೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ ಭಾಗವಹಿಸುವುದು ರಾಜಕೀಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. 

ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟನ್ನು ಬಲಪಡಿಸಲು, ಕಾಂಗ್ರೆಸ್ ತನ್ನ ಚಟುವಟಿಕೆಯನ್ನು ಹೆಚ್ಚಿಸಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ವಿರೋಧ ಪಕ್ಷಗಳ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನ ಪತ್ರ ರವಾನಿಸಿದ್ದಾರೆ.