ಆಸೀಸ್ ಕಪ್ತಾನ ಪ್ಯಾಟ್ ಕಮಿನ್ಸ್ ಗೆ ಒಲಿದ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ

ಲಂಡನ್: ಐಸಿಸಿ ಪ್ರತಿವರ್ಷವೂ ಕ್ರಿಕೆಟ್ ನ ಮೂರು ಮಾದರಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಆಟಗಾರನಿಗೆ ವರ್ಷದ ಕ್ರಿಕೆಟ್ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಅದರಂತೆ 2023ರಲ್ಲಿ ಟಿ20 ಕ್ರಿಕೆಟ್ ಹೊರತು ಪಡಿಸಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ತಂಡ ಪ್ರಶಸ್ತಿ ಗೆದ್ದು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಟೀಂ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಈ ಬಾರಿಯ ಪ್ರತಿಷ್ಠಿತ ಐಸಿಸಿ ಕ್ರಿಕೆಟ್ ಪ್ರಶಸ್ತಿ ಒಲಿದು ಬಂದಿದೆ.
ಪ್ಯಾಟ್ ಕಮಿನ್ಸ್ 2023ರ ಕ್ರಿಕೆಟ್ ಋತುವಿನಲ್ಲಿ ತನ್ನ ನಾಯಕತ್ವ ಹಾಗೂ ಆಟಗಾರನಾಗಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. 2023ರ ವಿಶ್ವಕಪ್ ಫೈನಲ್ ನಲ್ಲಿ ಅಂತೂ ಭಾರತದ ವಿರುದ್ಧ ಅಮೋಘ ಪ್ರದರ್ಶನವನ್ನೇ ನೀಡಿ ವಿಶ್ವ ಕ್ರಿಕೆಟ್ ನ ಗಮನ ಸೆಳೆದಿದ್ದರು.