ಅಣ್ಣಿಗೇರಿಯಲ್ಲಿ ಡಿ.27 ರಂದು ಸಂತೆ, ಜಾತ್ರೆ ನಿಷೇಧ

ಅಣ್ಣಿಗೇರಿಯಲ್ಲಿ ಡಿ.27 ರಂದು ಸಂತೆ, ಜಾತ್ರೆ ನಿಷೇಧ

ಧಾರವಾಡ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪುರಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯ ಒಟ್ಟು 23 ವಾರ್ಡ್‍ಗಳಲ್ಲಿ ಡಿಸೆಂಬರ್ 27 ರಂದು ಮತದಾನ ಜರುಗಲಿದೆ. ಚುನಾವಣೆಯನ್ನು ಮುಕ್ತವಾಗಿ ಮತ್ತು ಶಾಂತಿಯುತವಾಗಿ ಜರುಗಿಸುವ ಹಿತದೃಷ್ಟಿಯಿಂದ ಡಿ.27 ರಂದು ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ ಜರುಗಲಿರುವ ಸಂತೆ, ಜಾತ್ರೆ ಮತ್ತು ಉತ್ಸವಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.