ಸಂಪೂರ್ಣ ಸೂರ್ಯ ಗ್ರಹಣ ಎದುರಿಸಲು ಉತ್ತರ ಅಮೆರಿಕ ಖಂಡದಲ್ಲಿ ಭಾರೀ ಸಿದ್ಧತೆ - ಅಂದು ಶಾಲೆಗಳಿಗೆ ರಜೆ

ಸಂಪೂರ್ಣ ಸೂರ್ಯ ಗ್ರಹಣ ಎದುರಿಸಲು ಉತ್ತರ ಅಮೆರಿಕ ಖಂಡದಲ್ಲಿ ಭಾರೀ ಸಿದ್ಧತೆ - ಅಂದು ಶಾಲೆಗಳಿಗೆ ರಜೆ

ವಾಶಿಂಗ್ಟನ್ : ಮುಂದಿನ ತಿಂಗಳು ನಡೆಯಲಿರುವ ಸಂಪೂರ್ಣ ಸೂರ್ಯ ಗ್ರಹಣವನ್ನು ಎದುರಿಸಲು ಉತ್ತರ ಅಮೆರಿಕ ಖಂಡದಲ್ಲಿ ಭಾರೀ ಸಿದ್ಧತೆಗಳು ನಡೆಯುತ್ತಿವೆ. ಸುರಕ್ಷತಾ ಕಾರಣಗಳಿಗಾಗಿ ಹಲವು ಶಾಲೆಗಳನ್ನು ಮುಚ್ಚಲು ಅಮೆರಿಕ ನಿರ್ಧರಿಸಿದೆ. 

ಏಪ್ರಿಲ್ 8ರ ಖಗ್ರಾಸ ಸೂರ್ಯ ಗ್ರಹಣದ ದಿನ ಅಮೆರಿಕದ ಹೆಚ್ಚಿನ ರಾಜ್ಯಗಳು ಕತ್ತಲೆಗೆ ಜಾರುತ್ತವೆ ಎನ್ನಲಾಗಿದೆ. ಸೂರ್ಯ ಗ್ರಹಣದ ಪ್ರಭಾವಕ್ಕೆ ಒಳಪಡುವ ಅಮೆರಿಕದ ರಾಜ್ಯಗಳೆಂದರೆ- ಟೆಕ್ಸಾಸ್, ಓಕ್ಲಹಾಮ, ಅರ್ಕಾನ್ಸಸ್, ಮಿಝೂರಿ, ನ್ಯೂಯಾರ್ಕ್, ಪೆನ್ಸಿಲ್ವೇನಿಯ, ವರ್ಮಂಟ್, ಇಲಿನಾಯಿಸ್, ಇಂಡಿಯಾನ, ಓಹಿಯೊ, ನ್ಯೂಹ್ಯಾಂಪ್ಶಯರ್ ಮತ್ತು ಮೇನ್. 

ಸಂಪೂರ್ಣ ಸೂರ್ಯ ಗ್ರಹಣವು ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರೀ ಖೋತಾಕ್ಕೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ದಿನ ಅಮೆರಿಕದಾದ್ಯಂತದ ನೂರಾರು ಶಾಲೆಗಳು ಮುಚ್ಚಲಿವೆ.