INDvsSA 1st ODI: ಮಿಂಚಿನ ಬೌಲಿಂಗ್, ಅಬ್ಬರದ ಬ್ಯಾಟಿಂಗ್ - ಹರಿಣರ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

INDvsSA 1st ODI: ಮಿಂಚಿನ ಬೌಲಿಂಗ್, ಅಬ್ಬರದ ಬ್ಯಾಟಿಂಗ್ - ಹರಿಣರ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಜೋಹಾನ್ಸ್‌ಬರ್ಗ್: ಮಿಂಚಿನ ಬೌಲಿಂಗ್ ಹಾಗೂ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತವು ಸರಣಿಯನ್ನು 1-0 ಅಂತರದಿಂದ ಮುನ್ನಡೆ ಸಾಧಿಸಿದೆ. 

ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 27.3 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್‌ ನಷ್ಟಕ್ಕೆ 116 ರನ್‌ ಗಳಿಸಿತ್ತು. ತಂಡದ ಪರ ಆಂಡಿಲೆ ಫೆಹ್ಲುಕ್ವಾಯೊ 33 ರನ್ ಹಾಗೂ ಟೋನಿ ಡಿ ಜೋರ್ಜಿ 28 ರನ್‌ ಗಳಿಸಿದರು. 

117 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡವು 16.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 117 ರನ್‌ ಗಳಿಸಿ ಜಯ ಸಾಧಿಸಿದೆ. ಭಾರತದ ಪರ ಶ್ರೇಯಸ್ ಅಯ್ಯರ್ 52 ರನ್‌ (45 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಸಾಯಿ ಸುದರ್ಶನ್ 55 ರನ್ (43 ಎಸೆತ, 9 ಬೌಂಡರಿ) ಗಳಿಸಿದರು. 

ಇದಕ್ಕೂ ಮುನ್ನ ಭಾರತದ ಪರ ಅರ್ಷದೀಪ್ ಸಿಂಗ್ 5 ವಿಕೆಟ್‌ ಹಾಗೂ ಆವೇಶ್ ಖಾನ್ 4 ವಿಕೆಟ್‌ ಪಡೆದು ಮಿಂಚಿದರೆ, ಕುಲದೀಪ್ ಯಾದವ್ 1 ವಿಕೆಟ್‌ ಕಿತ್ತು ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ.