ತಜ್ಞರಲ್ಲಿ ಭಿನ್ನಾಭಿಪ್ರಾಯ : ಸಿಎಂ ಸಭೆಯಲ್ಲಿ ನಿರ್ಧಾರ

ಬೆಂಗಳೂರು : ಕೋವಿಡ್ ಸಂಬಂಧಿಸಿದಂತೆ ಆರಂಭವಾಗಿರುವ ಸಿಎಂ ಸಭೆಯಲ್ಲಿ ಕೋವಿಡ್ ತಜ್ಞರು ಭಾಗವಹಿಸಿದ್ದಾರೆ. ಆದರೆ ತಜ್ಞೆಯ ಅಭಿ ಪ್ರಾಯದಲ್ಲಿಯೇ ಭಿನ್ನಾಭಿಪ್ರಾಯಗಳಿರುವುದು ಗೊಂದಲಕ್ಕೆ ಕಾರಣವಾಗಿದೆ. ಹೌದು ಕೆಲ ತಜ್ಞರ ಪ್ರಕಾರ ಈ ತಿಂಗಳ ಅಂತ್ಯದಲ್ಲಿ ಕೋವಿಡ್ ಕೇಸ್ ಗಳು ಲಕ್ಷದ ಗಡಿ ದಾಟಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇನ್ನೂಳಿದ ತಜ್ಞರು ರೋಗಿಗಳು ಆಸ್ಪತ್ರೆ ಸೇರುತ್ತಿರುವವರ ಪ್ರಮಾಣ ಇಳಿಮುಖ ಇರುವ ಹಿನ್ನೆಲೆಯಲ್ಲಿ ಟಫ್ ರೂಲ್ಸ್ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಒಟ್ಟಿನಲ್ಲಿ ತಜ್ಞರ ಅಭಿಪ್ರಾಯ ಪ್ರಕಾರ ನೈಟ್ ಕರ್ಫ್ಯೂ ಜೊತೆಗೆ 50-50 ರೂಲ್ಸ್ ಅಷ್ಟೇ ಸಾಕು. ವೀಕೆಂಡ್ ಕರ್ಫ್ಯೂ ತೆರವು ಮಾಡಬಹದು ತಾಂತ್ರಿಕ ಸಲಹಾ ಸಮಿತಿ ತಜ್ಞರ ಬಹುತೇಕ ನಿರ್ಧಾರ ಆಗಿರುವ ಸಾಧ್ಯತೆಗಳಿವೆ. ಸದ್ಯ ಎಲ್ಲರ ಚಿತ್ತ ಸಭೆಯತ್ತ.