ಬಿಜೆಪಿಯ ಈ 9 ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ

ನವದೆಹಲಿ:ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಿದ್ದೇ ತಡ.ಬಿಜೆಪಿ ಆಡಳಿತ ಇರೋ 9 ರಾಜ್ಯದಲ್ಲೂ ಈಗ ಬೆಲೆ ಇಳಿಕೆ ಆಗಿದೆ. ಆ ರಾಜ್ಯಗಳು ಯಾವವು ಅಂತಿರೊ ಇಲ್ಲಿದೆ ನೋಡಿ ಆ ಡಿಟೈಲ್ಸ್. ನಿನ್ನೆ ರಾತ್ರಿಯಿಂದಲೇ ಕೇಂದ್ರ ಸರ್ಕಾರ ಪೆಟ್ರೋಲ್ ಪ್ರತಿ ಲೀಟರ್ ಗೆ 5 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 10 ರೂಪಾಯಿ ಕಡಿತ ಜಾರಿಗೆ ಬಂದಿದೆ. ಬಿಜೆಪಿ ಆಡಳಿತ ಇರೋ ರಾಜ್ಯಗಳಾದ ಅಸ್ಸಾಂ,ತ್ರಿಪುರಾ,ಕರ್ನಾಟಕ,ಗೋವಾ,ಉತ್ತರ ಪ್ರದೇಶ,ಗುಜರಾತ್,ಹಿಮಾಚಲ ಪ್ರದೇಶ,ಉತ್ತರಾಖಂಡದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಇಳಿಕೆ ಕಂಡಿದೆ. ಅದು ಹೀಗಿದೆ ನೋಡಿ. ಈ ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ ಗೊತ್ತೇ ? -ಅಸ್ಸಾಂ-ತ್ರಿಪುರ-ಮಣಿಪುರ-ಗೋವಾ-ಕರ್ನಾಟಕ:ಪೆಟ್ರೋಲ್-ಡೀಸೆಲ್ ಪ್ರತಿ ಲೀಟರ್ ಗೆ 7 ರೂಪಾಯಿ ಇಳಿಕೆ. - ಉತ್ತರ ಪ್ರದೇಶ:ಪೆಟ್ರೋಲ್-ಡೀಸೆಲ್ ಪ್ರತಿ ಲೀಟರ್ ದರ: ತಲಾ 12 ರೂಪಾಯಿ ಇಳಿಕೆ ಆಗಿದೆ. - ಗುಜರಾತ್:ಪೆಟ್ರೋಲ್-ಡೀಸೆಲ್ ಬೆಲೆ ಪ್ರತಿ ಲೀಟರ್ ದರ: ತಲಾ 7 ರೂಪಾಯಿ ಇಳಿಕೆ ಮಾಡಿದೆ. -ಉತ್ತರಾಖಂಡ ರಾಜ್ಯದಲ್ಲಿ ಅತೀ ಶೀಘ್ರದಲ್ಲಿಯೇ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಆಗಲಿದೆ -ಹಿಮಾಚಲ ಪ್ರದೇಶದಲ್ಲೂ ಬಹು ಬೇಗನೆ ಪೆಟ್ರೋಲ್-ಡೀಸೆಲ್ ದರ ಇಳಿಯಲಿದೆ ಈ ರಾಜ್ಯಗಳೂ ಹೀಗೆ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಮಾಡಿ ತಮ್ಮ ರಾಜ್ಯದ ಜನತೆಗೆ ಈಗ ದೀಪಾವಳಿ ಹಬ್ಬದ ಗಿಫ್ಟ್ ಕೊಟ್ಟಿವೆ.