ಹಾಡುಹಗಲೇ ಚಾಕುವಿನಿಂದ ಚುಚ್ಚಿದ ಗಾಂಜಾ ಮತ್ತಿನ ಮಂದಿ-ವ್ಯಕ್ತಿ ಗಂಭೀರ

ಹುಬ್ಬಳ್ಳಿ: ಹಾಡುಹಗಲೆ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು, ಪರಾರಿಯಾದ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಹೆಗ್ಗೆರಿ ಬಳಿ ನಡೆದಿದೆ. ಆಸೀಫ್ ಎಂಬಾತನೇ ಚಾಕುವಿಗೆ ಇರಿತಕ್ಕೊಳಗಾಗಿದ್ದಾನೆ. ಇಬ್ಬರು ದುಷ್ಕರ್ಮಿಗಳು ಗಾಂಜಾ ಮತ್ತಿನಲ್ಲಿ ಆಸೀಫ್‌ನಿಗೆ ಮೂರು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಆಸೀಫ್‌ನನ್ನು ಕಿಮ್ಸ್ ಗೆ ದಾಖಲಿಸಲಾಗಿದೆ. ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.