ಈ ದಿನಗಳಲ್ಲಿ ರದ್ದಾಗಲಿದೆ ಬೆಂಗಳೂರು-ಹುಬ್ಬಳ್ಳಿ ಇಂಟರ್‌ಸಿಟಿ ರೈಲು

ಈ ದಿನಗಳಲ್ಲಿ ರದ್ದಾಗಲಿದೆ ಬೆಂಗಳೂರು-ಹುಬ್ಬಳ್ಳಿ ಇಂಟರ್‌ಸಿಟಿ ರೈಲು

ಬೆಂಗಳೂರು: ಕೆ‌ಎಸ್‌ಆರ್ ಬೆಂಗಳೂರಿನಿಂದ ಧಾರವಾಡಕ್ಕೆ ತೆರಳುವ ಸೂಪರ್‌ಫಾಸ್ಟ್ ಇಂಟರ್‌ಸಿಟಿ ರೈಲಿನ ಸಂಚಾರವನ್ನು ಜನವರಿ 8, 11, 17, ಹಾಗೂ 22ರಂದು ರದ್ದುಗೊಳಿಸಲಾಗಿದೆ. ಈ ಬಗ್ಗೆ ರೈಲ್ವೆ ಇಲಾಕೆ ಪ್ರಕಟಣೆ ಹೊರಡಿಸಿದೆ‌. ಹಾಗೂ ಧಾರವಾಡದಿಂದ ಬೆಂಗಳೂರಿಗೆ ಹೊರಡುವ ಇದೇ ರೈಲನ್ನು ಜನವರಿ 9, 12, 18, ಮತ್ತು 23ರಂದು ರದ್ದುಗೊಳಿಸಲಾಗಿದೆ. ಹೊಸಪೇಟೆ ಕೆ‌ಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ವಿಶೇಷ ರೈಲನ್ನು ಜನವರಿ 11ರಂದು ಮತ್ತು ಕೆ‌ಎಸ್‌ಆರ್ ಬೆಂಗಳೂರು ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನ ಸಂಚಾರವನ್ನು ಜನವರಿ 11ರಂದು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ರೈಲ್ವೆ ಇಲಾಖೆ ತಿಳಿಸಿದೆ.