ನಾಳೆ ಮೈಸೂರು ಲೋಕಾ ಕಚೇರಿಗೆ ಸಿಎಂ - ವಿಚಾರಣೆಗೆ ಹಾಜರ್.!

ಮೈಸೂರು : ಸಿಎಂ ಸಿದ್ದರಾಮಯ್ಯಗೆ ತೀವ್ರ ಸಂಕಷ್ಟ ತಂದಿಟ್ಟ ಮುಡಾ ಕೇಸ್ ಪ್ರಕರಣದಲ್ಲಿ ಈಗಾಗಲೇ ನೋಟಿಸ್ ಜಾರಿಯಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಮೈಸೂರಿನ ನಿವಾಸಕ್ಕೆ ಆಗಮಿಸಲಿರೋ ಸಿಎಂ ಸಿದ್ದರಾಮಯ್ಯನವರು 10.30ಕ್ಕೆ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಲಿದ್ದಾರೆ.
ಇನ್ನು ಈಗಾಗಲೇ ಲೋಕಾ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯರನ್ನ ವಿಚಾರಣೆ ಮಾಡಲು ಪ್ರಶ್ನೆಗಳನ್ನ ಸಿದ್ದ ಮಾಡಿಕೊಂಡಿದ್ದು, ಮೈಸೂರು ಲೋಕಾಯುಕ್ತ ಕಚೇರಿಯಲ್ಲೇ ಈ ವಿಚಾರಣೆ ನಡೆಯಲಿದೆ. ವಿಚಾರಣೆ ಬಳಿಕ ಸಿಎಂ ಮತ್ತೇ ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದಾರೆ.