SSLC ವಿದ್ಯಾರ್ಥಿಗಳೇ 'ಪರೀಕ್ಷೆ ಭಯಬೇಡ' : ಮಾ.15 ರಂದು ವಿಶೇಷ 'Youtube' ಕಾರ್ಯಕ್ರಮ

ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳೇ ಮುಖ್ಯ ಪರೀಕ್ಷೆ ಎದುರಿಸಲು ಮಾ.15 ರಂದು ವಿಶೇಷ ಯೂಟ್ಯೂಬ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಎಸ್.ಎಸ್ಎಲ್ಸಿ ಪರೀಕ್ಷೆಯನ್ನು ದಿನಾಂಕ 21-03-2025 ರಿಂದ 04-04-2025ರವರೆಗೆ ನಡೆಸಲಾಗುತ್ತಿದೆ. ಈ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಆತಂಕ ಮತ್ತು ಭಯವಿಲ್ಲದೆ ಆತ್ಮ ಸ್ಥೆರ್ಯದಿಂದ ಎದುರಿಸಬೇಕು ಎಂಬುದು ಮಂಡಲಿಯ ಆಶಯವಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೆರ್ಯವನ್ನು ಹೆಚ್ಚಿಸಿ ಪರೀಕ್ಷೆಯನ್ನು ಅತ್ಯಂತ ಲವಲವಿಕೆಯಿಂದ ಎದುರಿಸಲು ಅಗತ್ಯವಿರುವ ಮಾರ್ಗದರ್ಶನವನ್ನು NIMHANS ನುರಿತ ಮನೋವೈದ್ಯರಿಂದ ದಿನಾಂಕ:15-03-2025 ರ ಸಾಯಂಕಾಲ 4.00 ರಿಂದ 5.00 ರವರಗೆ “LIVE YOUTUBE PODCAST” ಕಾರ್ಯಕ್ರಮವನ್ನು ಮಂಡಲಿ ವತಿಯಿಂದ ಆಯೋಜಿಸಲಾಗಿದೆ.
ಈ ಬಗ್ಗೆ ವಿದ್ಯಾರ್ಥಿಗಳು ಪೋಷಕರು ಶಿಕ್ಷಕರಿಗೆ ಮಾಹಿತಿಯನ್ನು ನೀಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.