ಪ್ಯಾರೀಸ್ : ಫ್ರಾನ್ಸ್ ದೇಶದ ನೂತನ ಪ್ರಧಾನಿಯಾಗಿ ಫ್ರಾನ್ಸ್ ಎಲಿಜಬೆತ್

ಪ್ಯಾರೀಸ್ : ಫ್ರಾನ್ಸ್ ದೇಶದ ನೂತನ ಪ್ರಧಾನಿಯಾಗಿ 61 ವರ್ಷ ವಯಸ್ಸಿನ ಎಲಿಜಬೆತ್ ಬೋರ್ನ್ ಅವರು ಸೋಮವಾರ ನೇಮಕಗೊಂಡಿದ್ದಾರೆ, ಫ್ರಾನ್ಸ್ ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆಯಾಗಿದ್ದಾರೆ.
ಈ ಮೊದಲು ಎಲಿಜಬೆತ್ ಬೋರ್ನ್ ಅವರು 2020 ರಿಂದ ಮ್ಯಾಕ್ರನ್ ಅವರ ಹಿಂದಿನ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಅದಕ್ಕೂ ಮೊದಲು ಸಾರಿಗೆ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
ಮುಂದಿನ ದಿನಗಳಲ್ಲಿ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಮತ್ತು ಎಲಿಜಬೆತ್ ಬೋರ್ನ್ ಪೂರ್ಣ ಪ್ರಮಾಣದ ಸರ್ಕಾರವನ್ನು ನೇಮಿಸುವ ನಿರೀಕ್ಷೆಯಿದೆ.