ಕೇಂದ್ರ ಬಜೆಟ್ 2022; ಯಾವುದು ದುಬಾರಿ?- ಯಾವುದರ ಅಗ್ಗ?

ನವದೆಹಲಿ: 2022ರ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ.01) 39.54 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಯಾವ ವಸ್ತು ದುಬಾರಿಯಾಗಿದೆ, ಯಾವ ವಸ್ತು ಬೆಲೆ ಇಳಿಕೆಯಾಗಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಯಾವುದು ದುಬಾರಿ? * ಪೆಟ್ರೋಲ್ ಇನ್ನಷ್ಟು ದುಬಾರಿ * ಸಿಗರೇಟ್, ಡಿಜಿಟಲ್ ಸಿಗಾರ್ ಕೂಡ ದುಬಾರಿ * ಎಥೆನಾಲ್ ಮಿಶ್ರಿತ ತೈಲ ಆಮದಿಗೆ ಹೆಚ್ಚು ಸುಂಕ * ಚಿನ್ನದ ಬೆಲೆ ಇಳಿಕೆ ಆಗೋದಿಲ್ಲ * ಛತ್ರಿ ಬೆಲೆ ಹೆಚ್ಚಳ, ಛತ್ರಿಗಳ ಮೇಲಿನ ಸುಂಕವನ್ನು ಶೇ.20ಕ್ಕೆ ಏರಿಸಲಾಗಿದೆ. ಯಾವುದರ ಬೆಲೆ ಇಳಿಕೆ? * ಮೊಬೈಲ್, ಚಾರ್ಜರ್ಗಳ ಬೆಲೆಯಲ್ಲಿ ಇಳಿಕೆ * ಡೀಸೆಲ್ ಇಳಿಕೆ ಸಾಧ್ಯತೆ * ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನ ಬೆಲೆ ಇಳಿಕೆ * ವೈದ್ಯಕೀಯ ಉಪಕರಣ, ಶ್ರವಣ ಸಾಧನಗಳು * ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ * ಕೃಷಿ ಉಪಕರಣಗಳ ಬೆಲೆಯಲ್ಲಿ ಇಳಿಕೆ * ರಾಸಾಯನಿಕ ಉತ್ಪನ್ನಗಳು * ವಜ್ರದ ಆಭರಣ, ಹರಳು ವಜ್ರದ ಮೇಲೆ ಶೇ.4ರಷ್ಟು ಸುಂಕ ಕಡಿತ * ಆರ್ಟಿಫಿಶಿಯಲ್ ಆಭರಣಗಳ ಮೇಲಿನ ಸುಂಕ ಕಡಿತ * ವೈದ್ಯಕೀಯ ಸಾಧನಗಳು ಮತ್ತು ಔಷಧಗಳು * ತಾಳೆ ಎಣ್ಣೆ, ಕಾಸ್ಮೇಟಿಕ್ಸ್, ಎಲೆಟ್ರಾನಿಕ್ ಉಪಕರಣ * ಪೀಠೋಪಕರಣಗಳು, ಪ್ಯಾಕೇಜಿಂಗ್ ಬಾಕ್ಸ್‌ಗಳು * ಎಲೆಕ್ಟ್ರಾನಿಕ್ ಸ್ಮಾರ್ಟ್ ಮೀಟರ್ * ಕರಕುಶಲ ವಸ್ತುಗಳು