ಬೆಂಗಳೂರು: ಕಾವೇರಿ ಕಿಚ್ಚು - ತಮಿಳುನಾಡಿನತ್ತ ಹೊರಟಿದ್ದ ವಾಟಾಳ್, ಸಾ.ರಾ.ಗೋವಿಂದ ಸೇರಿ ಹೋರಾಟಗಾರರು ಅರೆಸ್ಟ್

ಬೆಂಗಳೂರು: ಕಾವೇರಿ ನೀರಿಗಾಗಿ ತಮಿಳುನಾಡು ಗಡಿಯಲ್ಲಿ ಕಿಚ್ಚು ಶುರುವಾಗಿದ್ದು, ತಮಿಳುನಾಡು ವಿರುದ್ಧ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ನಡೆಸಿದ್ದಾರೆ.
ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ, ಕನ್ನಡ ಸೇನೆ ಕುಮಾರ್, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವ ಸೇರಿ ಅನೇಕ ಹೋರಾಟಗಾರರು ಕಾರಿನಲ್ಲೇ ತಮಿಳುನಾಡಿನತ್ತ ಹೊರಡಲು ಮುಂದಾಗಿದ್ದರು. ಈ ವೇಳೆ ಅವರನ್ನು ಅತ್ತಿಬೆಲೆ ಗಡಿಯಲ್ಲಿ ತಡೆದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.