ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ! - ಷೇರು ವಹಿವಾಟಿನಲ್ಲಿ ಸೆನ್ಸೆಕ್ಸ್ 730 ಅಂಕಗಳ ಕುಸಿತ, ನಿಫ್ಟಿ 1% ಕುಸಿತ

ನವದೆಹಲಿ: ಸೋಮವಾರ ಮೊದಲ ಬಾರಿಗೆ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ 87ಕ್ಕಿಂತ ಕಡಿಮೆಯಾಗಿದೆ. ಇದರೊಂದಿಗೆ, ಸೆನ್ಸೆಕ್ಸ್ 730 ಅಂಕಗಳ ಕುಸಿತದೊಂದಿಗೆ 76,774.05ಕ್ಕೆ ತಲುಪಿದ್ದರೆ, ನಿಫ್ಟಿ 1% ಕ್ಕಿಂತ ಹೆಚ್ಚು ಕುಸಿತದೊಂದಿಗೆ 23,239.15 ಕ್ಕೆ ತಲುಪಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025ರ ಕೇಂದ್ರ ಬಜೆಟ್ ಘೋಷಿಸಿದ ನಂತರ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾ ಮತ್ತು ಮೆಕ್ಸಿಕೊ ಮೇಲೆ 25% ಮತ್ತು ಚೀನಾದ ಮೇಲೆ 10% ಸುಂಕಗಳನ್ನು ವಿಧಿಸಿದ ಕೆಲವು ದಿನಗಳ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.