ಹಳೆ ವಾಹನಗಳಿಗೆ ದುಬಾರಿ ಶುಲ್ಕ-ಸರ್ಕಾರದ ಆದೇಶ ತಡೆದ ಹೈಕೋರ್ಟ್ !

ಹಳೆ ವಾಹನಗಳಿಗೆ ದುಬಾರಿ ಶುಲ್ಕ-ಸರ್ಕಾರದ ಆದೇಶ ತಡೆದ ಹೈಕೋರ್ಟ್ !

ಬೆಂಗಳೂರು: 15 ವರ್ಷಕಿಂತಲೂ ಹಳೆಯದಾದ ವಾಹನಗಳ ರಿಜಿಸ್ಟ್ರೇಷನ್ ಹಾಗೂ ಫಿಟ್‌ನೆಸ್ ನವೀಕರಣಕ್ಕೆ ಸರ್ಕಾರ ದುಬಾರಿ ಶುಲ್ಕದ ಆದೇಶ ಹೊರಡಿಸಿದೆ. ಆದರೆ, ಈ ಒಂದು ಆದೇಶಕ್ಕೆ ಹೈಕೋರ್ಟ್ ಈಗ ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಸರ್ಕಾರದ ಈ ಒಂದು ಆದೇಶವನ್ನ ಲಾರೀ ಮಾಲೀಕರ ಒಕ್ಕೂಟ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ಮಾಡಿರೋ ನ್ಯಾಯಮೂರ್ತಿ ಹೇಮಂತ್ ಚಂದನಗೌಡರಿದ್ದ ಪೀಠ ಈಗ ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ. 

ಅರ್ಜಿ ಸಂಬಂಧ ರಾಜ್ಯ ಸರ್ಕಾರ,ಸಾರಿಗೆ ಇಲಾಖೆ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. 

ಇನ್ನು ಹಳೆ ವಾಹನಗಳ ರಿಜಿಸ್ಟ್ರೇಷನ್ ಹಾಗೂ ಫಿಟ್‌ನೆಸ್ ನವೀಕರಣಕ್ಕೆ 10 ಸಾವಿರ ಶುಲ್ಕ ವಿಧಿಸಲಾಗುತ್ತಿದೆ. ಒಂದು ವೇಳೆ ಫಿಟ್‌ನೆಸ್ ಸರ್ಟಿಫಿಕೆಟ್ ನವೀಕರಣ ಅವಧಿ ಮುಗಿದಿದ್ದರೇ, 500 ರೂಪಾಯಿ ದಂಡ ವಿಧಿಸಲಾಗುತ್ತಿದೆ ಅಂತಲೇ ಲಾರಿ ಮಾಲೀಕರ ಪರ ವಕೀಲ ವಿಚಾರಣೆ ವೇಳೆ ವಾದಿಸಿದ್ದಾರೆ.