ರೂಲ್ ಫಾಲೋ ಮಾಡಿಲ್ಲ ಅಂದ್ರೆ ಎನ್ ಡಿ ಎಂ ಎ ಆಕ್ಟ್ ಅಡಿ ಕೇಸ್ ದಾಖಲು - ಕಮಲ್ ಪಂಥ್

ರೂಲ್ ಫಾಲೋ ಮಾಡಿಲ್ಲ ಅಂದ್ರೆ  ಎನ್ ಡಿ ಎಂ ಎ ಆಕ್ಟ್ ಅಡಿ ಕೇಸ್ ದಾಖಲು - ಕಮಲ್ ಪಂಥ್

ಬೆಂಗಳೂರು: ಸರ್ಕಾರದ ಗೈಡ್ ಲೈನ್ಸ್ ಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು, ಅನಾವಶ್ಯಕವಾಗಿ ಯಾರು ಹೊರಗಡೆ ಬರುವಂತಿಲ್ಲ ಬಂದ್ರೆ ಎನ್ ಡಿಎಂ ಎ ಆಕ್ಟ್ ಆಡಿ ಕೇಸ್ ದಾಖಲು ಮಾಡಿ ಕ್ರಮ ಕೈಗೊಳ್ತೀವಿ ಎಂದು ಪೊಲೀಸ್ ಇಲಾಖೆಯಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ. ಹತ್ತು ಗಂಟೆಯಿಂದ ಐದು ಗಂಟೆ ತನಕ ಮಾತ್ರ ಅನುಮತಿ‌ ನೀಡಲಾಗಿದೆ ಅದು ಅಗತ್ತವಸ್ತುಗಳ ಖರೀದಿ ಗೆ ಮಾತ್ರ ,ಯಾರಿಗೂ ಯಾವುದೇ ಪಾಸ್ ಇರಲ್ಲ. ಆಸ್ಪತ್ರೆ, ರೈಲ್ವೆ, ಟಿಕೆಟ್ ಸಂಬಂಧಿಸಿದಂತೆ ದಾಖಲೆ ಇರಬೇಕು. ಈಗಾಗಲೇ ಸಂಬಂಧಪಟ್ಟ ಪಬ್ , ರೆಸ್ಟೋರೆಂಟ್ ಮಾಲೀಕರಿಗೆ ಮಾಹಿತಿ ನೀಡಿದ್ದೇವೆ ಇರುವ ರೂಲ್ಸ್ ನಲ್ಲಿ ಯಾವುದೇ ಚೆಂಜ್ ಇಲ್ಲ ಎಂದು ಕಮೀಷನರ್ ಕಮಲ್ ಪಂಥ್ ತಿಳಿಸಿದ್ದಾರೆ. ಜನರು ಗುಂಪು ಸೇರಬಾರದು, ಸರ್ಕಾರದ ಅದೇಶ ವನ್ನು ಫಾಲೋ ಮಾಡೋದು ನಮ್ಮ ಕರ್ತವ್ಯ.ಇವತ್ತು ಮತ್ತೊಮ್ಮೆ ಸಭೆ ಸೇರಿ ಪರಿಣಾಮಕಾರಿಯಾಗಿ ಜಾರಿ ಮಾಡಲು ತೀರ್ಮಾನ ಮಾಡ್ತೀವಿ. ಅಯಾಕಟ್ಟಿನ ಸ್ಥಳಗಳಲ್ಲಿ ನಾಕಬಂದಿ ಹಾಕಿ ಪರಿಶೀಲನೆ ನಡೆಸಲಾಗುತ್ತದೆ. ಎಮ್ ಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾನಗರದಲ್ಲಿ ಪೊಲೀಸ್ ಸಿಬ್ಬಂದಿ ಗಳನ್ನು ಹೆಚ್ಚಸಿ, ಸಿಸಿಟಿವಿ ಅವಳಡಿಕೆ ಸಿದ್ದತೆ ಮಾಡಲಾಗುತ್ತಿದೆ ಎಂದಿದ್ದಾರೆ.