ಹುಬ್ಬಳ್ಳಿ: ಬಂಧಿತ ಆರೋಪಿಗಳು ಕಲಬುರಗಿ ಕಾರಾಗೃಹಕ್ಕೆ ಶಿಫ್ಟ್, ಲಾ ಆ್ಯಂಡ್ ಆರ್ಡರ್ ಕಾಪಾಡಲು ಈ ನಿರ್ಧಾರ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಗಲಭೆಕೊರರನ್ನು ಬಿಸಿಲು ನಾಡು ಕಲಬುರಗಿಗೆ ಶಿಪ್ಟ್ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೌದು,ಬಂಧಿತ 88 ಆರೋಪಿಗಳನ್ನು ಕಲಬುರಗಿಯ ಕೇಂದ್ರಿಯ ಕಾರಾಗೃಹಕ್ಕೆ ರವಾನೆ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಆರೋಪಿಗಳನ್ನು ಸ್ಥಳಾಂತರಿಸಿದ್ದಾರೆ. ಇನ್ನೂ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದ ಹುಬ್ಬಳ್ಳಿಯ 4 ನೇ ಜೆಎಮ್‌ಎಪ್‌ಸಿ ನ್ಯಾಯಾಲಯ ಇಂದು ಮತ್ತೇ 14 ಆರೋಪಿಗಳನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.