ಪ್ರಶಾಂತ್ ಕಿಶೋರ್ ಮಹತ್ವದ ಘೋಷಣೆ: ಹೊಸ ಪಕ್ಷ ಕಟ್ಟುವೆ ಎಂದ ಚುನಾವಣಾ ಚಾಣಾಕ್ಯ

ಪ್ರಶಾಂತ್ ಕಿಶೋರ್ ಮಹತ್ವದ ಘೋಷಣೆ: ಹೊಸ ಪಕ್ಷ ಕಟ್ಟುವೆ ಎಂದ ಚುನಾವಣಾ ಚಾಣಾಕ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್, ಜಗನ್ ಮೋಹನ್ ರೆಡ್ಡಿ ಸೇರಿದಂತೆ ಅನೇಕ ನಾಯಕರು ಅಧಿಕಾರದ ಗದ್ದುಗೆಗೆ ಏರಲು ನೆರವಾಗಿದ್ದ ಖ್ಯಾತ ರಾಜಕೀಯ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಹೊಸ ಪಕ್ಷ ಕಟ್ಟುವ ಮಹತ್ವ ನಿರ್ಧಾರವನ್ನು ಪ್ರಕಟಿಸಿದ್ದಾರೆ. 

ಹೊಸ ಪಕ್ಷದ ಹೆಸರನ್ನು ನೋಂದಣಿ ಮಾಡಿರುವ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಬಿಹಾರದಿಂದಲೇ ಆರಂಭ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸುಧಾರಣೆಗೆ ಹಲವು ಸಲಹೆಗಳನ್ನು ನೀಡಿದ್ದ ಅವರಿಗೆ ಕಾಂಗ್ರೆಸ್ ನಾಯಕರಿಂದ ಸೂಕ್ತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸೇರ್ಪಡೆ ಅಸಾಧ್ಯ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಅವರ ಮುಂದಿನ ನಡೆದ ಏನಿರಬಹುದು ಎಂಬ ಬಗ್ಗೆ ಕುತೂಹಲ ವ್ಯಕ್ತವಾಗಿತ್ತು. ಇದೀಗ ಎಲ್ಲ ಕುತೂಹಲಗಳಿಗೆ ತೆರೆ ಎಳೆದಿರುವ ಪ್ರಶಾಂತ್ ಕಿಶೋರ್ ಸ್ವಂತ ರಾಜಕೀಯ ಪಕ್ಷ ಘೋಷಿಸುವ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ.