KSRTC ಸಿಬ್ಬಂದಿಯ ಹಠಾತ್ ಗೈರು-ಆದಾಯದ ಮೇಲೆ ಭಾರಿ ಪೆಟ್ಟು !

KSRTC ಸಿಬ್ಬಂದಿಯ ಹಠಾತ್ ಗೈರು-ಆದಾಯದ ಮೇಲೆ ಭಾರಿ ಪೆಟ್ಟು !

ಬೆಂಗಳೂರು: ಕೆ.ಎಸ್.ಆರ್.ಟಿ.ಸಿಯ ಒಂದು ವರ್ಗದ ಸಿಬ್ಬಂದಿ ಈಗ ಹಠಾತ್ತಾಗಿಯೇ ಗೈರು ಆಗುತ್ತಿದ್ದಾರೆ. ಈ ಒಂದು ಬೆಳವಣಿಗೆಯಿಂದ ಕೆಎಸ್‌ಆರ್‌ಟಿಸಿಗೆ ಭಾರಿ ಸಮಸ್ಯೆನೇ ಆಗಿ ಬಿಟ್ಟಿದೆ ನೋಡಿ. 

ಕೋವಿಡ್ ಲಾಕ್‌ ಡೌನ್ ಬಳಿಕ ಕೆಎಸ್‌ಆರ್‌ಟಿಸಿ ಪ್ರಾಥಮಿಕ ಹಂತದಿಂದ ಬಸ್ ಓಡಿಸಲು ಆರಂಭಿಸಿದೆ.ಈ ಒಂದು ಕಾರಣಕ್ಕೋ ಏನೋ. ಹಠಾತ್ ಆಗಿಯೇ ಸಿಬ್ಬಂದಿ ಗೈರು ಆಗುತ್ತಿದ್ದಾರೆ. 

ಇದರಿಂದ ದೈನಂದಿನ ವ್ಯವಹಾರ ಹಾಗೂ ಆದಾಯದ ಮೇಲೂ ಏಟು ಬಿದ್ದಿದೆ.ಕೆಎಸ್‌ಆರ್‌ಟಿಸಿಯಲ್ಲಿ ಒಟ್ಟು 35,000 ಸಿಬ್ಬಂದಿ ಇದ್ದಾರೆ. ಇವರಲ್ಲಿ 8,414 ಜನ ಶಿಸ್ತಿನ ಪ್ರಕರಣ ಎದುರಿಸುತ್ತಿದ್ದಾರೆ. 

ಇವುಗಳಲ್ಲಿ ಕಳೆದ ಮೂರು ದಿನಗಳಿಂದ ಸುಮಾರು 7,200 ಜನ ಸಿಬ್ಬಂದಿಯ ಶಿಸ್ತಿನ ಕ್ರಮ ಕೊನೆಗೊಳಿಸಲಾಗಿದೆ. ನೂರರಿಂದ ಎರಡನೂರು ಇಲ್ಲವೇ 500 ದಂಡ ವಿಧಿಸಲಾಗಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಷ್ಠವೆಂದರೂ 25 ಸಾವಿರದಷ್ಟು ದಂಡವಿಧಿಸಬಹುದಾಗಿದೆ.