ಎಸ್​ಎಂ ಕೃಷ್ಣಗೆ ಪದ್ಮವಿಭೂಷಣ, ಎಸ್​ಎಲ್​ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಪ್ರಶಸ್ತಿ

ಎಸ್​ಎಂ ಕೃಷ್ಣಗೆ ಪದ್ಮವಿಭೂಷಣ, ಎಸ್​ಎಲ್​ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಪ್ರಶಸ್ತಿ

ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪುರಸ್ಕಾರಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಒಟ್ಟು 106 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಇದರಲ್ಲಿ ಆರು ಪದ್ಮವಿಭೂಷಣ, ಒಂಭತ್ತು ಪದ್ಮಭೂಷಣ ಮತ್ತು 91 ಪದ್ಮಶ್ರೀಗಳನ್ನು ಪ್ರಕಟಿಸಲಾಗಿದೆ. 

ಕರ್ನಾಟಕದ ಮಾಜಿ ಸಿಎಂ ಎಸ್‌.ಎಂ ಕೃಷ್ಣ ಸೇರಿ 6 ಸಾಧಕರಿಗೆ ಪದ್ಮಭೂಷಣ, ಸುಧಾಮೂರ್ತಿ, ಎಸ್‌ ಎಲ್‌ ಭೈರಪ್ಪ ಸೇರಿದಂತೆ 9 ಸಾಧಕರಿಗೆ ಪದ್ಮಭೂಷಣ ಹಾಗೂ ಶ್ರೀಶಾ ರಶೀದ್ ಅಹ್ಮದ್ ಖಾದ್ರಿ ಎಸ್‌, ಸುಬ್ಬರಾಮನ್, ರಾಣಿ ರಾಚಯ್ಯ, ಮುನಿ ವೆಂಕಟಪ್ಪ ಸೇರಿ 91 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿ ಆದೇಶಿಸಿದೆ.