ಟ್ಯಾಕ್ಸಿ ಸೇವೆಗಳಿಗೆ "ಒಂದು ನಗರ ಒಂದು ದರ" ನೀತಿ - ರಾಜ್ಯ ಸರ್ಕಾರ ಆದೇಶ

ಟ್ಯಾಕ್ಸಿ ಸೇವೆಗಳಿಗೆ

ಬೆಂಗಳೂರು: ರಾಜ್ಯಾದ್ಯಂತ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರಗಳನ್ನು ಒಂದೇ ಮಾದರಿಯಲ್ಲಿ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ರಾಜ್ಯದ ಎಲ್ಲಾ ಉಪ ಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ, ಪ್ರಾದೇಶಿಕ, ಸಹಾಯಕ ಪ್ರಾದೇಶಿಕ, ಸಾರಿಗೆ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು, ಹೆಚ್ಚುವರಿ ಕಾರ್ಯದರ್ಶಿಗಳು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ. 

 

ಪರಿಷ್ಕೃತ ಟ್ಯಾಕ್ಸಿ ದರಗಳು ಹೀಗಿವೆ: 

* 10 ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ವಾಹನಗಳಿಗೆ ಕನಿಷ್ಟ 4 ಕಿಲೋಮೀಟರ್ ವರೆಗೆ 100 ರೂಪಾಯಿ, ಪ್ರತಿ ಕಿಲೋಮೀಟರ್‌ಗೆ 24 ರೂಪಾಯಿ. 

* 10 ಲಕ್ಷದಿಂದ 15 ಲಕ್ಷ ರೂಪಾಯಿವರೆಗಿನ ಮೌಲ್ಯದ ವಾಹನಗಳಿಗೆ ಕನಿಷ್ಟ 4 ಕಿಲೋಮೀಟರ್‌ವರೆಗೆ 115 ರೂಪಾಯಿ, ಆನಂತ್ರ ಪ್ರತಿ ಕಿಲೋಮೀಟರ್‌ಗೆ 28 ರೂಪಾಯಿ. 

* 15 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಟ್ಯಾಕ್ಸಿ ವಾಹನಗಳಿಗೆ 4 ಕಿಲೋ ಮೀಟರ್‌ವರೆಗೆ 130 ರೂಪಾಯಿ, ಆನಂತ್ರ ಪ್ರತಿ ಕಿಲೋಮೀಟರ್‌ಗೆ 32 ರೂಪಾಯಿ ದರವನ್ನು ರಾಜ್ಯ ಸರ್ಕಾರ ನಿಗದಿ ಪಡಿಸಲಾಗಿದೆ.