ಇನ್ಮುಂದೆ PPF ಸೇರಿದಂತೆ ಸಣ್ಣ ಉಳಿತಾಯ ಖಾತೆದಾರರ ನಾಮಿನಿ ಅಪ್ಡೇಟ್‌ಗೆ ಯಾವುದೇ ಶುಲ್ಕ!

ಇನ್ಮುಂದೆ PPF ಸೇರಿದಂತೆ ಸಣ್ಣ ಉಳಿತಾಯ ಖಾತೆದಾರರ ನಾಮಿನಿ ಅಪ್ಡೇಟ್‌ಗೆ ಯಾವುದೇ ಶುಲ್ಕ!

ನವದೆಹಲಿ : ಸಣ್ಣ ಉಳಿತಾಯ ಖಾತೆಗಳಲ್ಲಿ ಹೂಡಿಕೆ ಮಾಡುವವರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. 

ಸಾರ್ವಜನಿಕ ಭವಿಷ್ಯ ನಿಧಿ (PPF), ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸೇರಿದಂತೆ ಅಂಚೆ ಕಚೇರಿ ಯೋಜನೆಗಳಲ್ಲಿ ನಾಮಿನಿ ವಿವರಗಳನ್ನು ಉಚಿತವಾಗಿ ಬದಲಾಯಿಸಬಹುದು ಎಂದು ಹೇಳಿದೆ. 

ಸರ್ಕಾರವು ಏಪ್ರಿಲ್ 2 ರಂದು ಉಳಿತಾಯ ಪ್ರಚಾರ ಸಾಮಾನ್ಯ ನಿಯಮಗಳು-2018 ಕ್ಕೆ ತಿದ್ದುಪಡಿ ತಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. 

ಇನ್ಮುಂದೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ನಾಮಿನೇಷನ್ ಬದಲಾಯಿಸಲು ಯಾವುದೇ ಶುಲ್ಕಗಳು ಅನ್ವಯವಾಗುವುದಿಲ್ಲ. ಈ ಹಿಂದೆ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳು ಸಣ್ಣ ಉಳಿತಾಯ ಯೋಜನೆಗಳ ನಾಮಿನಿ ವಿವರಗಳನ್ನು ಬದಲಾಯಿಸಲು ಅಥವಾ ಹೊಸ ನಾಮಿನಿಯನ್ನು ಸೇರಿಸಲು ₹50 ಶುಲ್ಕ ವಿಧಿಸಲಾಗಿತ್ತು. 

ಆದರೆ ಕೇಂದ್ರದ ನಿರ್ಧಾರದಿಂದಾಗಿ, ಇನ್ಮುಂದೆ ನಾಮಿನೇಷನ್ ಅಪ್ಡೇಟ್‌ಗೆ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಉಚಿತವಾಗಿ ನಾಮಿನೇಷನ್‌ ವಿವರಗಳನ್ನು ಬದಲಾಯಿಸಬಹುದು.