T20 ರ‍್ಯಾಂಕಿಂಗ್: 22 ಸ್ಥಾನ ಜಿಗಿದ ಹಾರ್ದಿಕ್ ಪಾಂಡ್ಯ

T20 ರ‍್ಯಾಂಕಿಂಗ್: 22 ಸ್ಥಾನ ಜಿಗಿದ ಹಾರ್ದಿಕ್ ಪಾಂಡ್ಯ

ದುಬೈ: ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 71*(30) ರನ್ ಗಳಿಸಿದ ನಂತರ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20ಐ ಬ್ಯಾಟರ್‌ಗಳ ಇತ್ತೀಚಿನ ಶ್ರೇಯಾಂಕದಲ್ಲಿ 22 ಸ್ಥಾನಗಳನ್ನು ಜಿಗಿತ ಕಂಡಿದ್ದಾರೆ. ಪಾಂಡ್ಯ ಸದ್ಯ 446 ರೇಟಿಂಗ್ ಅಂಕಗಳೊಂದಿಗೆ 65ನೇ ಸ್ಥಾನದಲ್ಲಿದ್ದಾರೆ. ಇದಲ್ಲದೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಅದೇ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ನಂತರ T20 ಬೌಲರ್‌ಗಳ ಶ್ರೇಯಾಂಕದಲ್ಲಿ 24 ಸ್ಥಾನ ಜಿಗಿದು 33ನೇ ಸ್ಥಾನಕ್ಕೆ ತಲುಪಿದ್ದಾರೆ.