ವಾಹನ ಮಾಲೀಕರಿಗೆ ಸಿಹಿ ಸುದ್ದಿ - ಹಳೆ ವಾಹನ ಗುಜರಿಗೆ ಹಾಕಿ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ತೆರಿಗೆ ವಿನಾಯಿತಿ

ವಾಹನ ಮಾಲೀಕರಿಗೆ ಸಿಹಿ ಸುದ್ದಿ - ಹಳೆ ವಾಹನ ಗುಜರಿಗೆ ಹಾಕಿ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ತೆರಿಗೆ ವಿನಾಯಿತಿ

ವಾಹನ ಗುಜರಿ ನೀತಿಯಂತೆ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಮಾಲೀಕರಿಗೆ ಪ್ರೇರೇಪಣೆ, ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ನೀಡಲು ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ ತೆರಿಗೆ ವಿನಾಯಿತಿ ಪಟ್ಟಿ ಪರಿಷ್ಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. 

ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಹನ ಸ್ಕ್ರಾಪಿಂಗ್ ಗೆ ನೀಡುವವರು ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ದ್ವಿಚಕ್ರ ವಾಹನಕ್ಕೆ 1 ಸಾವಿರದಿಂದ 5000 ರೂ.ವರೆಗೆ, 4 ಚಕ್ರದ ವಾಹನಗಳಿಗೆ 10,000 ದಿಂದ 50,000 ರೂ.ವರೆಗೆ, ಸರಕು ಸಾಗಣೆ ವಾಹನಗಳಿಗೆ ತೆರಿಗೆ ಮೊತ್ತದ ಶೇಕಡ 10ರಷ್ಟು ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.