BREAKING: ಇಂದಿರಾ ಕ್ಯಾಂಟೀನ್ ಊಟದ ದರ ₹27 ಏರಿಕೆ

BREAKING: ಇಂದಿರಾ ಕ್ಯಾಂಟೀನ್ ಊಟದ ದರ ₹27 ಏರಿಕೆ

ಬೆಂಗಳೂರು: ಇನ್ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ಊಟದ ದರ ಏರಿಸಲು ಸರಕಾರ ನಿರ್ಧರಿಸಿದೆ. ಇಂದು ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. 

ಇಂದಿರಾ ಕ್ಯಾಂಟೀನ್ ಊಟದ ದರವನ್ನು ₹60ಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಗ್ರಾಹಕರು ₹27 ಪಾವತಿಸಬೇಕಿದೆ. ಬಾಕಿ ಮೊತ್ತ ₹33ಯನ್ನು ಸರಕಾರವೇ ಸಬ್ಸಿಡಿ ಮೂಲಕ ಭರಿಸಲಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮುಂದಿನ ಆದೇಶದವರೆಗೆ ಹಳೆಯ ದರವೇ ಅನ್ವಯ ಆಗಲಿದೆ‌. ಸಂಪುಟ ಸಭೆ ಬಳಿಕ ಸಚಿವ ಹೆಚ್.ಕೆ ಪಾಟೀಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.