ಧಾರವಾಡ: ಹೈಕೋರ್ಟ್‌ನಲ್ಲಿ ಮುಡಾ ಅರ್ಜಿ ವಿಚಾರಣೆ ಆರಂಭ

ಧಾರವಾಡ: ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಧಾರವಾಡ ಹೈಕೋರ್ಟ್‌ನಲ್ಲಿ ಆರಂಭಗೊಂಡಿದೆ.
ಸ್ನೇಹಮಯಿ ಕೃಷ್ಣ ಅವರ ಪರ ವಕೀಲರಾದ ಮಣಿಂದರ್ ಸಿಂಗ್ ಅವರು ಸುದೀರ್ಘ ವಾದ ಮಂಡಿಸುತ್ತಿದ್ದಾರೆ. ಅಭಿಷೇಕ ಮನು ಸಿಂಘ್ವಿ ಅವರು ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸುತ್ತಿದ್ದಾರೆ. ಕಪಿಲ್ ಸಿಬಲ್ ಅವರು ರಾಜ್ಯ ಸರ್ಕಾರದ ಪರ ವಿಶೇಷ ಪ್ರತಿನಿಧಿಯಾಗಿ ಕೋರ್ಟ್ ಕಲಾಪಕ್ಕೆ ವೀಡಿಯೋ ಕಾನ್ಫರನ್ಸ್ ಮುಖಾಂತರ ಹಾಜರಾಗಿದ್ದಾರೆ. ಇನ್ನು ದುಷ್ಯಂತ ಧವೆ ಅವರು ವಿವಾದಿತ ನಿವೇಶನದ ಮೂಲ ಮಾಲೀಕರ ಪರ ವಕೀಲರಾಗಿದ್ದು, ಅವರೂ ವೀಡಿಯೋ ಕಾನ್ಫರನ್ಸ್ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದಾರೆ.