ಮಾತು ತಪ್ಪಿದ ಮೋದಿ ಸರ್ಕಾರ : ಮಾ.21 ರಿಂದ ಮತ್ತೆ ಪ್ರತಿಭಟನೆ

ನವದೆಹಲಿ : ಪ್ರಧಾನಿ ಮೋದಿ ಸರ್ಕಾರ ಭರವಸೆಗಳನ್ನು ಉಲ್ಲಂಘಿಸುತ್ತಿದೆ. ಹಾಗಾಗಿ ಮಾ. 21 ರಿಂದ ಮತ್ತೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಸ್ ಕೆಎಂ ನಾಯಕ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ರೈತರ ಬೃಹತ್ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆಎಂ) ಮತ್ತೆ ಸರಣಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಮಾರ್ಚ್ 21ರಂದು ಒಂದು ದಿನ ಬೃಹತ್ ಪ್ರತಿಭಟನೆ ನಡೆಸಲಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಮಾನದಂಡದ ಬೆಲೆ ನೀಡುವಂತೆ ಒತ್ತಾಯಿಸಿ ಮುಂದಿನ ಹಂತದಲ್ಲಿ ಏಪ್ರಿಲ್ 9 ರಿಂದ 17 ರವರೆಗೆ ದೇಶಾದ್ಯಂತ ಮುಷ್ಕರ ಹೂಡಲಾಗುವುದು ಎಂದು ಹೇಳಿದೆ. ಕೇಂದ್ರದಿಂದ ಅಧಿಕೃತ ಭರವಸೆಗಳ ಹೊರತಾಗಿಯೂ ರೈತರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗಿಲ್ಲ. ಲಖಿಮ್ ಪುರ ಖೇರಿಯಲ್ಲಿ ನಡೆದ ಕೊಲೆ ಅಪರಾಧಕ್ಕೆ ಸಂಬಂಧಿಸಿದಂತೆ ರೈತರಿಗೆ ನಿಜವಾದ ನ್ಯಾಯ ಸಿಕ್ಕಿಲ್ಲ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇನ್ನೂ ಸಮಿತಿಯನ್ನು ರಚಿಸಿಲ್ಲ.