ಮಂಗಳೂರು ಗೋವಾ ವಂದೇ ಭಾರತ್ ರೈಲು- ಡಿಸೆಂಬರ್ 30ರಂದು ಪ್ರಧಾನಿ ಚಾಲನೆ

ಮಂಗಳೂರು : ಡಿಸೆಂಬರ್ 30ರಂದು ಮಂಗಳೂರು- ಗೋವಾ ಸಹಿತ ರಾಷ್ಟ್ರದ 6 ಕಡೆಗಳಲ್ಲಿ 'ವಂದೇ ಭಾರತ್ ' ರೈಲು ಸಂಚಾರ ಆರಂಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ 4 ಹಾಗೂ 5ನೇ ಫ್ಲಾಟ್ ಫಾರಂ ಕೂಡ ಡಿಸೆಂಬರ್ 30ರಂದು ಉದ್ಘಾಟನೆಯಾಗಲಿದೆ.
ಪ್ರಸ್ತಾವಿತ ವೇಳಾಪಟ್ಟಿ ಪ್ರಕಾರ ಮಂಗಳೂರು- ಗೋವಾ ನಡುವಿನ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ, ಉಳಿದ 6 ದಿನಗಳಲ್ಲಿ ಸಂಚಾರ ನಡೆಸಲಿದೆ. ಉಡುಪಿ ಹಾಗೂ ಕಾರವಾರದಲ್ಲಿ ಮಾತ್ರ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.