ಕೊರೊನಾ ಸೋಂಕಿತರಿಗೆ ಮೆರ್ಕ್ ಮಾತ್ರೆ ಓಕೆ

ಕೊರೊನಾ ಸೋಂಕಿತರಿಗೆ  ಮೆರ್ಕ್ ಮಾತ್ರೆ ಓಕೆ

ಇಂಗ್ಲೆಂಡ್: ಹೆಮ್ಮಾರಿ ಸೋಂಕು ಕೊರೊನಾ ತಡೆಗೆ ವಿಶ್ವದ ಪ್ರತಿಯೊಂದು ದೇಶಗಳು ಔಷಧಿ ಕಂಡುಹಿಡಿಯಲು ತಮ್ಮದೇ ಆದ ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಇದೀಗ ಅಮೆರಿಕದ ಔಷಧ ತಯಾರಿಕ ಕಂಪೆನಿ ಮೆರ್ಕ್ ತಯಾರಿಸಿರುವ ಮಾತ್ರೆಗಳನ್ನು ಕೊರೊನಾ ಸೋಂಕಿತರಿಗೆ ನೀಡಲು ಬ್ರಿಟನ್ ಔಷಧ ನಿಯಂತ್ರಣಾ ಸಂಸ್ಥೆ ಅನುಮೋದನೆ ನೀಡಿದೆ. ಬ್ರಿಟನ್ ಈ ಮಾತ್ರೆಯ ಬಳಕೆಗೆ ಅನುಮತಿ ನೀಡಿದ ವಿಶ್ವದ ಮೊದಲ ದೇಶ ಎನಿಸಿದೆ. ಮೊಲ್ನುಪಿರವಿರ್ ಹೆಸರಿನಲ್ಲಿ ಈ ಮಾತ್ರೆಯು ಬ್ರಿಟನ್ನಲ್ಲಿ ಜನರಿಗೆ ಲಭ್ಯವಾಗಲಿದೆ. ಕೊವಿಡ್ ಸೋಂಕಿತರಿಗೆ ಈ ಮಾತ್ರೆಗಳನ್ನು ದಿನಕ್ಕೆ ಎರಡು ಬಾರಿ ನೀಡಲಾಗುವುದು. ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆಯನ್ನು, ಸೋಂಕಿನ ಲಕ್ಷಣಗಳನ್ನು ಮತ್ತು ಸಾವು ಸಂಭವಿಸುವ ಸಾಧ್ಯತೆಗಳನ್ನು ಇದು ಕಡಿಮೆ ಮಾಡುತ್ತದೆ. ಬ್ರಿಟನ್ ಈವರೆಗೆ ಸುಮಾರು 5 ಲಕ್ಷ ಮೆರ್ಕ್ ಮಾತ್ರೆಗಳಿಗೆ ಬೇಡಿಕೆಯಿಟ್ಟದ್ದರೆ, ಅಮೆರಿಕ 17 ಲಕ್ಷ ಮಾತ್ರೆಗಳು ಬೇಕು ಎಂದು ಕೋರಿದೆ.