ಇಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ

ಇಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಆತಂಕದ ನಡುವೆ ಯಶಸ್ವಿಯಾಗಿ ನಡೆದಿದ್ದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ. 

ರಾಜ್ಯಾದ್ಯಂತ ಜೂನ್ 25ರಿಂದ ಜುಲೈ 4ವರೆಗೆ ನಡೆದ ಪರೀಕ್ಷೆಯಲ್ಲಿ ಸುಮಾರು 8,48,203 ಮಕ್ಕಳು ಹಾಜರಾಗಿದ್ದರು. ಅವರಲ್ಲಿ 4,48,560 ಬಾಲಕರು, 3,99,643 ಬಾಲಕಿಯರು ಪರೀಕ್ಷೆ ಬರೆದಿದ್ದರು. 

ಪರೀಕ್ಷೆಯ ಫಲಿತಾಂಶ ಇಲಾಖೆಯ www.kseeb.kar.nic.in, www.karresults.nic.in ವೆಬ್ ಸೈಟ್ ನಲ್ಲಿ ಹಾಗೂ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಫಲಿತಾಂಶ ಬರಲಿದೆ. ಇದಕ್ಕೆ ಪ್ರತ್ಯೇಕ ನೋಂದಣಿ ಅಗತ್ಯವಿಲ್ಲ.