ಗ್ರಾಹಕರಿಗೆ ಶಾಕ್‌ ಕೊಟ್ಟ ಇಂಡಿಯನ್ ಆಯಿಲ್

ಗ್ರಾಹಕರಿಗೆ ಶಾಕ್‌ ಕೊಟ್ಟ ಇಂಡಿಯನ್ ಆಯಿಲ್

ನವದೆಹಲಿ: ಇಂಡಿಯನ್ ಆಯಿಲ್ ಶುಕ್ರವಾರದಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 80 ಪೈಸೆಗಳಷ್ಟು ಹೆಚ್ಚಿಸಲಿದೆ ಎಂದು ವರದಿಯಾಗಿದೆ. ಇದು ಈ ವಾರದಲ್ಲಿ ಕಂಡ ಮೂರನೇ ಬೆಲೆ ಏರಿಕೆಯಾಗಿದೆ ಎಂದು ಇಂಧನ ವಿತರಕರಿಗೆ ಕಳುಹಿಸಲಾದ ಅಧಿಸೂಚನೆಯನ್ನು ಉಲ್ಲೇಖಿಸಿ ರಾಯಿಟರ್ಸ್ ಗುರುವಾರ ವರದಿ ಮಾಡಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 97.81 ರೂ. ಮತ್ತು ಡೀಸೆಲ್ 89.07 ರೂ.ಗೆ ಮಾರಾಟವಾಗಲಿದೆ ಎಂದು ಅಧಿಸೂಚನೆ ತಿಳಿಸಿದೆ.