ಶ್ರೀಲಂಕಾದಲ್ಲಿ 'ರಾಜಪಕ್ಸೆ'ಗಳಿಲ್ಲದೇ ನೂತನ ಕ್ಯಾಬಿನೆಟ್ ರಚನೆ !

ಕೊಲಂಬೋ: ಶ್ರೀಲಂಕಾದ ಪರಿಸ್ಥಿತಿ ಬಿಗಡಾಯಿಸಿದೆ. ಆರ್ಥಿಕ ಪರಿಸ್ಥಿತಿ ಅದೋಗತಿಗೆ ಹೋಗಿದೆ.ಜನ ದಂಗೆ ಎದ್ದಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಇದೇ ವಾರವೇ ಹೊಸ ಸಚಿವ ಸಂಪುಟ ರಚನೆ ಮಾಡಲಾಗುವುದು. ನೂತನ ಪ್ರಧಾನಿಯ ನೇಮಕ ಕೂಡ ಆಗುತ್ತದೆ ಎಂದು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಭರವಸೆ ಕೊಟ್ಟಿದ್ದಾರೆ.
ದೇಶವನ್ನ ಉದ್ದೇಶಿಸಿ, ಬುಧವಾರ ರಾತ್ರಿ ರಾಜಪಕ್ಸೆ ಮಾತನಾಡಿದ್ದಾರೆ. ಯಾವುದೇ ರಾಜಪಕ್ಸೆ ಇಲ್ಲದೇ ಯುವ ಕ್ಯಾಬಿನೆಟ್ ಅನ್ನೇ ರಚಿಸುತ್ತೇವೆ. ದೇಶ ಅರಾಜಕತೆಗೆ ಜಾರುತ್ತಿದೆ. ಇದನ್ನ ತಡೆಯಲು ರಾಜಕೀಯ ಪಕ್ಷಗಳ ಜೊತೆಗೆ ಮಾತನಾಡೋದಾಗಿಯೂ ಭರವಸೆ ನೀಡಿದ್ದಾರೆ.
ನೂತನ ಸರ್ಕಾರದ ಪ್ರಧಾನಿಗೆ ಹೊಸ ಹೊಸ ಕಾರ್ಯಕ್ರಮ ರೂಪಿಸಲು ಅವಕಾಶ ಕೊಡಲಾಗುವುದು. ಈ ದೇಶವನ್ನ ಮುನ್ನಡೆಸಲು ಅವರಿಗೆ ಅವಕಾಶವ ಇದ್ದೇ ಇರುತ್ತದೆ ಅಂತಲೂ ಗೊಟಬಯ ರಾಜಪಕ್ಸೆ ಹೇಳಿದ್ದಾರೆ.