ಬೆಂಗಳೂರು: ಕೆಐಎ ಮೆಟ್ರೋ ನಿಲ್ದಾಣಕ್ಕೆ ಗುತ್ತಿಗೆ-2026ರ ಜೂನ್‌ನಲ್ಲಿ ಸಂಚಾರ ಆರಂಭ ಸಾಧ್ಯತೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದಲ್ಲಿ, ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಏರ್‌ಪೋರ್ಟ್ ಸಿಟಿ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಪೂರ್ವ ಅರ್ಹತೆ ಗುತ್ತಿಗೆಯನ್ನು ಬಿಐಎಎಲ್ ಆಹ್ವಾನಿಸಿದೆ.
ನಗರದ ರೇಷ್ಮೆ ಮಂಡಳಿ ಇಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಕಾಮಗಾರಿಯನ್ನು ಮೂರು ಸಂಸ್ಥೆಗಳು ನಿರ್ವಹಿಸುತ್ತವೆ. 2026ರ ಜೂನ್ ವೇಳೆ ಈ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ವಹಿಸಿಕೊಂಡಿದೆ.
ಇನ್ನು ನೀಲಿ ಮಾರ್ಗವೂ ಕೇಂದ್ರೀಯ ರೇಷ್ಮೆ ಮಂಡಳಿ ಕೆ.ಆರ್ ಪುರಂ ಹೆಬ್ಬಾಳ್ ಮೂಲಕ ಕೆಐಎಲ್ ಸಂಪರ್ಕಿಸುತ್ತದೆ. ಒಟ್ಟು 39 ಕಿಲೋಮೀಟರ್ ಉದ್ದದ ಈ ಮಾರ್ಗವನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಎರಡು ಹಂತಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಹಾಗೂ ಈ ಕಾಮಗಾರಿಗೆ ಬರೋಬ್ಬರಿ 14,778 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.